Publish Date: Wed, 05 Sep 2018 (09:21 IST)
Updated Date: Wed, 05 Sep 2018 (09:23 IST)
ಮುಂಬೈ: ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಟೆಸ್ಟ್ ಸರಣಿ ಸೋತ ಮೇಲೆ ನಾಯಕ ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆಯೇ ಬ್ಯಾಟಿಂಗ್ ದಿಗ್ಗಜ ಸುನಿಲ್ ಗವಾಸ್ಕರ್ ಸಂಶಯ ವ್ಯಕ್ತಪಡಿಸಿದ್ದಾರೆ.
ಅಷ್ಟೇ ಅಲ್ಲದೆ, ಟೀಂ ಇಂಡಿಯಾ ಕೊಹ್ಲಿ ಎಂಬ ಏಕೈಕ ಬ್ಯಾಟ್ಸ್ ಮನ್ ಮೇಲೆ ಅವಲಂಬಿತವಾಗಿರುವುದಕ್ಕೆ ಇತರ ಬ್ಯಾಟ್ಸ್ ಮನ್ ಗಳ ಮೇಲೆ ಕಿಡಿ ಕಾರಿದ್ದಾರೆ.
ಯಾವತ್ತೂ ಕೊಹ್ಲಿಯೇ ಶತಕ ಗಳಿಸಬೇಕು. ತಂಡಕ್ಕೆ ನೆರವಾಗಬೇಕು ಎಂದರೆ ಹೇಗೆ ಎಂದು ಸುನಿಲ್ ಗವಾಸ್ಕರ್ ಕಿಡಿ ಕಾರಿದ್ದಾರೆ. ‘ತವರಿನಲ್ಲಿ ಶ್ರೀಲಂಕಾ, ವೆಸ್ಟ್ ಇಂಡೀಸ್ ನಲ್ಲಿ ಕೊಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾ ಚೆನ್ನಾಗಿಯೇ ಆಡಿತು. ಹೀಗಾಗಿ ಕೊಹ್ಲಿ ಮೇಲೆ ಭಾರೀ ಭರವಸೆಯಿತ್ತು. ಧೋನಿಯಿಂದ ನಾಯಕತ್ವ ಪಡೆದಾಗ ಅವರ ಮೇಲೆ ಸಾಕಷ್ಟು ನಿರೀಕ್ಷೆಯಿತ್ತು. ಆದರೆ ಸಮರ್ಥ ದ. ಆಫ್ರಿಕಾ, ಇಂಗ್ಲೆಂಡ್ ವಿರುದ್ಧ ಅವರು ಆಡಿದ ರೀತಿ ಅವರ ನಾಯಕತ್ವವನ್ನೇ ಪ್ರಶ್ನಿಸುವಂತೆ ಮಾಡಿದೆ’ ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.