Publish Date: Tue, 04 Sep 2018 (09:03 IST)
Updated Date: Tue, 04 Sep 2018 (09:05 IST)
ಮುಂಬೈ: ಇಂಗ್ಲೆಂಡ್ ವಿರುದ್ಧ ಸರಣಿ ಸೋಲಿನ ಬಳಿಕ ಅಭಿಮಾನಿಗಳು ಟೀಂ ಇಂಡಿಯಾ ಬ್ಯಾಟ್ಸ್ ಮನ್ ಗಳ ವಿರುದ್ಧ ಸಹಜವಾಗಿಯೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅದರಲ್ಲೂ ಆರಂಭಿಕರಾಗಿ ಅವಕಾಶ ಪಡೆದೂ ಸರಿಯಾಗಿ ಬಳಸಿಕೊಳ್ಳದ ಕೆಎಲ್ ರಾಹುಲ್, ಶಿಖರ್ ಧವನ್ ಮೇಲೆ ಅಭಿಮಾನಿಗಳ ಆಕ್ರೋಶ ಹೆಚ್ಚಾಗಿದೆ. ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯುದ್ದಕ್ಕೂ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದ ಕೆಎಲ್ ರಾಹುಲ್ ರನ್ನು ಮನೆಗೆ ಕಳುಹಿಸಿ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧ ದ್ವಿತೀಯ ಇನಿಂಗ್ಸ್ ನಲ್ಲಿ ರಾಹುಲ್ ಶೂನ್ಯ ಸಂಪಾದಿಸಿದ್ದರು. ಇದರ ಬೆನ್ನಲ್ಲೇ ಅಭಿಮಾನಿಗಳು ರಾಹುಲ್, ಧವನ್ ಎಲ್ಲಾ ಇಂಗ್ಲೆಂಡ್ ಪ್ರವಾಸ ಮಾಡಲು ಬಂದಿದ್ದಾರಷ್ಟೇ. ಇವರು ಸ್ವಲ್ಪವೂ ಜವಾಬ್ಧಾರಿ ತೋರಿ ಆಡಿಲ್ಲ. ಇವರನ್ನೆಲ್ಲಾ ಇಂಗ್ಲೆಂಡ್ ಪ್ರವಾಸ ಮಾಡಿಸಿದ್ದು ಸಾಕು. ಇವರೆಲ್ಲಾ ಟಿ20 ಕ್ರಿಕೆಟ್ ಗೆ ಮಾತ್ರ ಲಾಯಕ್ಕು ಮನೆಗೆ ಕಳುಹಿಸಿ ಎಂದು ಅಭಿಮಾನಿಗಳು ಸಿಟ್ಟು ಹೊರ ಹಾಕಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.