Publish Date: Tue, 04 Sep 2018 (08:59 IST)
Updated Date: Tue, 04 Sep 2018 (09:01 IST)
ಸೌಥಾಂಪ್ಟನ್: ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಸರಣಿ ಸೋತ ಮೇಲೂ ಭಾರತೀಯ ಕ್ರಿಕೆಟ್ ಅಭಿಮಾನಿಗಳು ತಮ್ಮ ನಾಯಕ ವಿರಾಟ್ ಕೊಹ್ಲಿ ಮೇಲಿನ ಪ್ರೀತಿ ಕಡಿಮೆ ಮಾಡಿಲ್ಲ.
ತಂಡ ಸೋತರೂ, ಕೊಹ್ಲಿ ಈ ಸರಣಿಯಲ್ಲಿ ಆಡಿದ ರೀತಿಗೆ ಅಭಿಮಾನಿಗಳು ಖುಷಿಯಾಗಿದ್ದಾರೆ. ಹಾಗೆಯೇ ಕೊಹ್ಲಿ ಬಿಟ್ಟರೆ ಇನ್ನುಳಿದ ಯಾವುದೇ ಬ್ಯಾಟ್ಸ್ ಮನ್ ಗಳು ಇಂಗ್ಲೆಂಡ್ ಬೌಲರ್ ಗಳನ್ನು ಎದುರಿಸುವ ಧೈರ್ಯ ಮಾಡದ್ದಕ್ಕೆ ಛೀಮಾರಿ ಹಾಕಿದ್ದಾರೆ.
ಟೀಂ ಇಂಡಿಯಾಗೆ ವಿರಾಟ್ ಕೊಹ್ಲಿ ಒಬ್ಬರೇ ಇದ್ದರೆ ಸಾಕು. ಅವರು ಔಟಾದೊಡನೆ ಸೋಲು ಗ್ಯಾರಂಟಿ ಎನ್ನುವುದು ಗೊತ್ತಾಗುತ್ತದೆ. ಕಿಂಗ್ ಕೊಹ್ಲಿ ಆಡಿದ ರೀತಿ ನಮಗೆ ಇಷ್ಟವಾಯಿತು ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.