ಸೌಥಾಂಪ್ಟನ್: ಇಂಗ್ಲೆಂಡ್ ವಿರುದ್ಧ ಆಘಾತಕಾರಿ ಸೋಲು ಅನುಭವಿಸಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸೋಲಿನಲ್ಲೂ ವೈಯಕ್ತಿಕ ದಾಖಲೆ ಮಾಡಿದ್ದಾರೆ.
									
			
			 
 			
 
 			
					
			        							
								
																	ಟೀಂ ಇಂಡಿಯಾ ದ್ವಿತೀಯ ಇನಿಂಗ್ಸ್ ನಲ್ಲಿ ವಿರಾಟ್ ಔಟ್ ಆಗುವವರೆಗೂ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು. ಆದರೆ ಕೊಹ್ಲಿ 58 ರನ್ ಗಳಿಸಿ ಔಟಾಗುವುದರೊಂದಿಗೆ ಪಂದ್ಯ ನಿಯಂತ್ರಣ ತಪ್ಪಿತು.
									
										
								
																	58 ರನ್ ಗಳಿಸಿದ ಕೊಹ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ನಾಯಕರಾಗಿ 4000 ರನ್ ಪೂರೈಸಿದ ಮೊದಲ ಭಾರತೀಯ ನಾಯಕ ಎಂಬ ದಾಖಲೆ ಮಾಡಿದರು. ಇದಕ್ಕೂ ಮೊದಲು ಮೊದಲ ಇನಿಂಗ್ಸ್ ನಲ್ಲಿ ಕೊಹ್ಲಿ 9 ರನ್ ಗಳಿಸಿದಾಗ ಟೆಸ್ಟ್ ಕ್ರಿಕೆಟ್ ನಲ್ಲಿ ಎರಡನೇ ಅತೀ ವೇಗದ 6000 ರನ್ ಪೂರೈಸಿದ ಭಾರತೀಯ ಬ್ಯಾಟ್ಸ್ ಮನ್ ಎಂಬ ದಾಖಲೆ ಮಾಡಿದ್ದರು.
									
											
							                     
							
							
			        							
								
																	ನಾಯಕನಾಗಿ ಕೊಹ್ಲಿ 4000 ರನ್ ಪೂರೈಸಿದ್ದು, ಇದರಲ್ಲಿ 16 ಶತಕ, 9 ಅರ್ಧಶತಕ ಸೇರಿದೆ. 243 ರನ್ ಅವರ ಗರಿಷ್ಠ ರನ್.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.