Select Your Language

Notifications

webdunia
webdunia
webdunia
webdunia

ನಾಯಕನ ವಿರುದ್ಧ ಮಾತನಾಡಿ ಸಂಕಷ್ಟಕ್ಕೆ ಸಿಲುಕಿದ ಟೀಂ ಇಂಡಿಯಾ ಕ್ರಿಕೆಟಿಗ

ನಾಯಕನ ವಿರುದ್ಧ ಮಾತನಾಡಿ ಸಂಕಷ್ಟಕ್ಕೆ ಸಿಲುಕಿದ ಟೀಂ ಇಂಡಿಯಾ ಕ್ರಿಕೆಟಿಗ
ತಿರುವನಂತಪುರಂ , ಭಾನುವಾರ, 2 ಸೆಪ್ಟಂಬರ್ 2018 (08:27 IST)
ತಿರುವನಂತಪುರಂ: ಟೀಂ ಇಂಡಿಯಾ ಯುವ ಕ್ರಿಕೆಟಿಗ ಸಂಜು ಸ್ಯಾಮ್ಸನ್ ಇದೀಗ ತಮ್ಮ ರಾಜ್ಯ ತಂಡದ ನಾಯಕನ ವಿರುದ್ಧ ಮಾತನಾಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಸಂಜು ಸ್ಯಾಮ್ಸನ್ ಸೇರಿದಂತೆ 13 ಕ್ರಿಕೆಟಿಗರು ಕೇರಳ ನಾಯಕ ಸಚಿನ್ ಬೇಬಿ ವಿರುದ್ಧ ನಾಯಕನ ಘನತೆಗೆ ಕುತ್ತು ತರುವಂತೆ ಮಾತನಾಡಿದ್ದಾರೆಂದು ಆರೋಪಿಸಿ ಕೇರಳ ಕ್ರಿಕೆಟ್ ಅಸೋಸಿಯೇಷನ್ ಶಿಕ್ಷೆ ವಿಧಿಸಿದೆ.

ಇವರಲ್ಲಿ ಐವರು ಆಟಗಾರರನ್ನು ಮುಂದಿನ ಐದು ಪಂದ್ಯಗಳಿಗೆ ಅಮಾನತುಗೊಳಿಸಲಾಗಿದೆ. ಸಂಜು ಸ್ಯಾಮ್ಸನ್ ಸೇರಿದಂತೆ ಉಳಿದ ಆಟಗಾರರಿಗೆ ಬಿಸಿಸಿಐ ನೀಡುವ ಪಂದ್ಯದ ಶುಲ್ಕವನ್ನು ದಂಡದ ರೂಪದಲ್ಲಿ ತೆರುವಂತೆ ಶಿಕ್ಷೆ ವಿಧಿಸಲಾಗಿದೆ. ಈ ದಂಡದ ಹಣವನ್ನು ಈ ಆಟಗಾರರು ಕೇರಳ ಪ್ರವಾಹ ಸಂತ್ರಸ್ತರಿಗೆ ನೆರವಾಗಲು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲು ಕೇರಳ ಕ್ರಿಕೆಟ್ ಅಸೋಸಿಯೇಷನ್ ಸೂಚಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ರಾಹುಲ್ ದ್ರಾವಿಡ್ ಗರಡಿಯ ಮತ್ತೊಬ್ಬ ಹುಡುಗ ಟೀಂ ಇಂಡಿಯಾಗೆ