ಸೌಥಾಂಪ್ಟನ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆದ ನಾಲ್ಕನೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಭಾರತ ಇದ್ದಕ್ಕಿದ್ದಂತೆ ಇಂಗ್ಲೆಂಡ್ ಎದುರು 60 ರನ್ ಗಳಿಂದ ಸೋಲಲು ಕಾರಣವಾಗಿದ್ದು, ಅಪರೂಪಕ್ಕೆ ಟೆಸ್ಟ್ ಪಂದ್ಯದಲ್ಲಿ ಅವಕಾಶ ಪಡೆದ ಮೊಯಿನ್ ಅಲಿ.
 
ಇಂಗ್ಲೆಂಡ್ ನೀಡಿದ್ದ 244 ರನ್ ಗಳ ಗುರಿ ಬೆನ್ನತ್ತುವುದು ಸ್ವಲ್ಪ ಕಷ್ಟವೇ ಆಗಿದ್ದರೂ ಅಸಾಧ್ಯವೇನೂ ಆಗಿರಲಿಲ್ಲ. ಆದರೆ ಆರಂಭದಲ್ಲಿ ಮೂರು ವಿಕೆಟ್ ಕಳೆದುಕೊಂಡ ಟೀಂ ಇಂಡಿಯಾಗೆ ಮಧ್ಯಮ ಕ್ರಮಾಂಕದಲ್ಲಿ ನಾಯಕ ಕೊಹ್ಲಿ, ಉಪನಾಯಕ ರೆಹಾನೆ ಬಲ ನೀಡಿದರು. ಕೊಹ್ಲಿ 58 ರನ್ ಗಳಿಸಿದರೆ, ರೆಹಾನೆ 51 ರನ್ ಗಳಿಸಿದರು. ಈ ಇಬ್ಬರೂ ಜೋಡಿಯನ್ನು ಮೊಯಿನ್ ಅಲಿ ಬೆನ್ನು ಬೆನ್ನಿಗೆ ಪೆವಿಲಿಯನ್ ಗೆ ಕಳುಹಿಸಿದ್ದೇ ಟೀಂ ಇಂಡಿಯಾದ ಸೋಲಿಗೆ ಕಾರಣವಾಯಿತು.
									
			
			 
 			
 
 			
			                     
							
							
			        							
								
																	ಮೊಯಿನ್ ಅಲಿ ಇಂಗ್ಲೆಂಡ್ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದೇ ಅಪರೂಪಕ್ಕೆ. ಅವರು ಹಲವು ದಿನಗಳಿಂದ ಟೆಸ್ಟ್ ಕ್ರಿಕೆಟ್ ಆಡಿರಲಿಲ್ಲ. ಆದರೆ ಈ ಪಂದ್ಯದಲ್ಲಿ ಸ್ಥಾನ ಪಡೆದಿದ್ದು, ಭಾರತದ ದುರದೃಷ್ಟವೇನೋ. ಒಟ್ಟು ನಾಲ್ಕು ವಿಕೆಟ್ ಕಿತ್ತ ಅಲಿ ಟೀಂ ಇಂಡಿಯಾ ಸೋಲಿಗೆ ಕಾರಣವಾದರು.
									
										
								
																	ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.