Publish Date: Tue, 04 Sep 2018 (08:48 IST)
Updated Date: Tue, 04 Sep 2018 (08:49 IST)
ಮುಂಬೈ: ಇಂಗ್ಲೆಂಡ್ ವಿರುದ್ಧ ಸರಣಿ ಸೋಲಿನ ನಿರಾಶೆಯಲ್ಲಿರುವ ಟೀಂ ಇಂಡಿಯಾ ಕ್ರಿಕೆಟ್ ಅಭಿಮಾನಿಗಳು ಇದೀಗ ಕ್ರಿಕೆಟಿಗರ ಮೇಲೆ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸುತ್ತಿದ್ದಾರೆ.
ಸರಣಿಯಲ್ಲಿ ಸತತವಾಗಿ ವಿಫಲವಾಗಿರುವ ಕೆಎಲ್ ರಾಹುಲ್ ಮೇಲಂತೂ ಅಭಿಮಾನಿಗಳ ಸಿಟ್ಟು ತಾರಕಕ್ಕೇರಿದೆ. ಅದು ರಾಹುಲ್ ಮಾಡಿದ ಟ್ವೀಟ್ ನಿಂದ ಮತ್ತಷ್ಟು ಉರಿದುಬೀಳುವಂತಾಗಿದೆ.
ಸಹ ಕ್ರಿಕೆಟಿಗ ಇಶಾಂತ್ ಶರ್ಮಾ ಜನ್ಮ ದಿನಕ್ಕೆ ರಾಹುಲ್ ಟ್ವೀಟ್ ಮಾಡಿ ತಂಡದಲ್ಲಿರುವ ಅತೀ ವಿನಯವಂತ, ನಿಷ್ಠಾವಂತ, ಪ್ರೀತಿಯ ವ್ಯಕ್ತಿ ನೀವು. ನಿಮ್ಮಂತಹ ಹಿರಿಯ ಆಟಗಾರರು ತಂಡದಲ್ಲಿರುವುದೇ ಗ್ರೇಟ್ ವಿಷಯ. ಹ್ಯಾಪಿ ಬರ್ತ್ ಡೇ’ ಎಂದು ಬರೆದುಕೊಂಡಿದ್ದರು.
ಇದನ್ನು ನೋಡಿ ಉರಿದುಬಿದ್ದಿರುವ ಅಭಿಮಾನಿಗಳು ರಾಹುಲ್ ಕಳೆದ 10 ಇನಿಂಗ್ಸ್ ಗಳಲ್ಲಿ ಮಾಡಿದ ಸ್ಕೋರ್ ಗಳ ವಿವರ ನೀಡಿದ್ದಲ್ಲದೆ, ಈ ರೀತಿ ಸೋತ ಮೇಲೆ ನಾಚಿಕೆ ಬಿಟ್ಟು ಟ್ವೀಟ್ ಮಾಡುತ್ತೀರಲ್ಲಾ ಎಂದು ಟ್ರೋಲ್ ಮಾಡಿದ್ದಾರೆ. ಅಷ್ಟೇ ಅಲ್ಲ, ಇನ್ ಸ್ಟಾಗ್ರಾಂನಲ್ಲಿ ಮಾಡೆಲಿಂಗ್ ಫೋಟೋ ಹಾಕುತ್ತಾ ಕಾಲ ಕಳಿ. ಕ್ರಿಕೆಟ್ ಗೆ ಲಾಯಕ್ಕಲ್ಲ ಎಂದು ಖಾರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.