ಪಾಕಿಸ್ತಾನಕ್ಕೆ ಹೋಗಲ್ಲ ಎಂದ್ರು ಸುನಿಲ್ ಗವಾಸ್ಕರ್

ಭಾನುವಾರ, 12 ಆಗಸ್ಟ್ 2018 (08:35 IST)
ನವದೆಹಲಿ: ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುವ ಕಾರ್ಯಕ್ರಮಕ್ಕೆ ಆಹ್ವಾನ ಬಂದಿದ್ದರೂ ಹೋಗುವುದಿಲ್ಲ ಎಂದು ಭಾರತದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಹೇಳಿದ್ದಾರೆ.
 

ಇಮ್ರಾನ್ ಪದಗ್ರಹಣ ಸಮಾರಂಭಕ್ಕೆ ಗವಾಸ್ಕರ್ ಸೇರಿದಂತೆ ಕಪಿಲ್ ದೇವ್, ನವಜೋತ್ ಸಿಂಗ್ ಸಿಧು ಮುಂತಾದವರಿಗೆ ಆಹ್ವಾನ ಬಂದಿತ್ತು. ಆದರೆ ಈ ಮೊದಲು ಗವಾಸ್ಕರ್ ಕೇಂದ್ರ ಸರ್ಕಾರದ ಸಲಹೆ ಕೇಳಬೇಕಷ್ಟೇ ಎಂದಿದ್ದರು.

ಇದೀಗ ತಾವು ಪದಗ್ರಹಣಕ್ಕೆ ಸಮಾರಂಭಕ್ಕೆ ಹೋಗುವುದಿಲ್ಲ ಎಂದಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವಿನ ರಾಜಕೀಯ ಸಂಬಂಧದ ಕಾರಣದಿಂದ ಈ ಸಮಾರಂಭಕ್ಕೆ ಹೋಗದೇ ಇರಲು ಗವಾಸ್ಕರ್ ನಿರ್ಧರಿಸಿದ್ದಾರೆ. ಆದರೆ ತಮ್ಮ ಕಡೆಯಿಂದ ಇಮ್ರಾನ್ ಗೆ ಶುಭ ಹಾರೈಸಿ ಪತ್ರ ಬರೆದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕೆಎಲ್ ರಾಹುಲ್ ಮಾಡೆಲಿಂಗ್, ಐಪಿಎಲ್ ಗಷ್ಟೇ ಲಾಯಕ್ಕು!