Select Your Language

Notifications

webdunia
webdunia
webdunia
webdunia

ಇಮ್ರಾನ್ ಖಾನ್ ಪದಗ್ರಹಣ ಸಮಾರಂಭಕ್ಕೆ ಸುನಿಲ್ ಗವಾಸ್ಕರ್ ಹೋಗ್ತಾರಾ?

ಇಮ್ರಾನ್ ಖಾನ್ ಪದಗ್ರಹಣ ಸಮಾರಂಭಕ್ಕೆ ಸುನಿಲ್ ಗವಾಸ್ಕರ್ ಹೋಗ್ತಾರಾ?
ಮುಂಬೈ , ಸೋಮವಾರ, 6 ಆಗಸ್ಟ್ 2018 (10:09 IST)
ಮುಂಬೈ: ಪಾಕಿಸ್ತಾನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿರುವ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಪದಗ್ರಹಣ ಸಮಾರಂಭಕ್ಕೆ ಭಾರತದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಗೆ ಆಮಂತ್ರಣ ಸಿಕ್ಕಿದೆ ಎನ್ನಲಾಗಿದೆ. ಈ ಬಗ್ಗೆ ಗವಾಸ್ಕರ್ ಏನು ಹೇಳಿದ್ದಾರೆ ಗೊತ್ತಾ?
 

ಆಗಸ್ಟ್ 14 ರಂದು ನಡೆಯಲಿರುವ ಸಮಾರಂಭಕ್ಕೆ ಸುನಿಲ್ ಗವಾಸ್ಕರ್, ನವಜೋತ್ ಸಿಂಗ್ ಸಿದು, ಕಪಿಲ್ ದೇವ್ ಸೇರಿದಂತೆ ತಮ್ಮ ಸಮಕಾಲೀನ ಕ್ರಿಕೆಟಿಗರಿಗೆ ಇಮ್ರಾನ್ ಆಹ್ವಾನ ನೀಡಿದ್ದಾರೆ. ಈ ಬಗ್ಗೆ ಸುನಿಲ್ ಗವಾಸ್ಕರ್ ತಮ್ಮ ಮೌನ ಮುರಿದಿದ್ದಾರೆ.

‘ನಾನು ಸಮಾರಂಭಕ್ಕೆ ಹೋಗಬಹುದೇ ಎಂಬ ಕುರಿತು ಕೇಂದ್ರ ಸರ್ಕಾರದ ಒಪ್ಪಿಗೆ ಪಡೆಯುತ್ತೇನೆ. ಸರ್ಕಾರದ ಅಭಿಪ್ರಾಯ ಪಡೆದು ಓಕೆ ಎಂದರೆ ಮಾತ್ರ ಹೋಗುತ್ತೆನೆ. ನನಗೆ ಆಮಂತ್ರಣ ಸಿಕ್ಕಿದೆ. ಹೋಗುವ ಮನಸ್ಸೂ ಇದೆ. ಆದರೆ ಆ ದಿನ ನನಗೆ ಲಾರ್ಡ್ಸ್ ‍ಟೆಸ್ಟ್ ನಲ್ಲಿ ಕಾಮೆಂಟರಿ ಕರ್ತವ್ಯವೂ ಇದೆ. ಹಾಗಾಗಿ ಹೋಗಲು ಸಾಧ್ಯವಾಗುತ್ತದೆ ಎಂದು ಹೇಳಲಾಗದು’ ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕ್ರಿಕೆಟಿಗ ಧೋನಿಯನ್ನು ಭೇಟಿ ಮಾಡಿದ್ದೇಕೆ?