Publish Date: Wed, 17 Feb 2021 (09:27 IST)
Updated Date: Wed, 17 Feb 2021 (09:29 IST)
ಚೆನ್ನೈ: ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್ ಮನ್ ಶುಬ್ನಂ ಗಿಲ್ ಮೊಣಕೈಗೆ ಗಾಯ ಮಾಡಿಕೊಂಡಿದ್ದಾರೆ.
ಅವರನ್ನು ಸ್ಕ್ಯಾನಿಂಗ್ ಗೊಳಪಡಿಸಲಾಗಿದೆ. ಇನ್ನಷ್ಟೇ ಅವರ ಗಾಯದ ತೀವ್ರತೆ ತಿಳಿದುಬರಬೇಕಿದೆ. ಸೋಮವಾರ ಕ್ಷೇತ್ರ ರಕ್ಷಣೆ ವೇಳೆ ಅವರ ಮೊಣಕೈಗೆ ಚೆಂಡು ಬಡಿದು ಗಾಯವಾಗಿತ್ತು. ತಕ್ಷಣವೇ ಅವರು ಪೆವಿಲಿಯನ್ ಗೆ ಮರಳಿದ್ದರು. ಅವರ ಬದಲಿಗೆ ನಿನ್ನೆ ಕೂಡಾ ಮಯಾಂಕ್ ಅಗರ್ವಾಲ್ ಕ್ಷೇತ್ರ ರಕ್ಷಣೆ ಮಾಡಿದ್ದರು.