ದುಬೈ: ಏಷ್ಯಾ ಕಪ್ ಕ್ರಿಕೆಟ್ ನಲ್ಲಿ ಆಡಲು ದುಬೈನಲ್ಲಿ ಬೀಡು ಬಿಟ್ಟಿರುವ ಟೀಂ ಇಂಡಿಯಾ ಕ್ರಿಕೆಟಿಗರ ನೆಟ್ ಅಭ್ಯಾಸದ ವೇಳೆ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಪತಿ, ಪಾಕ್ ಕ್ರಿಕೆಟಿಗ ಶೊಯೇಬ್ ಮಲಿಕ್ ಧೋನಿಯತ್ತ ಸ್ನೇಹ ಹಸ್ತ ಚಾಚಿದ್ದಾರೆ.
ಧೋನಿ ಸೇರಿದಂತೆ ಭಾರತೀಯ ಕ್ರಿಕೆಟಿಗರು ಅಭ್ಯಾಸ ನಡೆಸುತ್ತಿದ್ದ ನೆಟ್ಸ್ ಗೆ ಬಂದ ಶೊಯೇಬ್ ಮಲಿಕ್ ಧೋನಿಗೆ ಹಸ್ತಾಲಾಘವ ಮಾಡಿದ್ದಲ್ಲದೆ, ಟೀಂ ಇಂಡಿಯಾ ಕ್ರಿಕೆಟಿಗರನ್ನು ಮಾತನಾಡಿಸಿ ತೆರಳಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ನಡುವೆ ಸೆಪ್ಟೆಂಬರ್ 19 ರಂದು ಏಷ್ಯಾ ಕಪ್ ಲೀಗ್ ಪಂದ್ಯ ನಡೆಯಲಿದ್ದು, ಇದಕ್ಕೂ ಮೊದಲು ಶೊಯೇಬ್ ಮಲಿಕ್ ಧೋನಿ ಬಳಿ ಕೆಲಹೊತ್ತು ಉಭಯಕುಶಲೋಪರಿ ನಡೆಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.