Publish Date: Sun, 16 Sep 2018 (08:33 IST)
Updated Date: Sun, 16 Sep 2018 (08:35 IST)
ದುಬೈ: ಏಷ್ಯಾ ಕಪ್ ನಲ್ಲಿ ಭಾರತದ ಅಭಿಯಾನ ದುರ್ಬಲ ಹಾಂಗ್ ಕಾಂಗ್ ವಿರುದ್ಧ ಸೆಪ್ಟೆಂಬರ್ 18 ರಿಂದ ಆರಂಭವಾಗಲಿದೆ. ಆದರೆ ನಮ್ಮ ಗುರಿ ಪಾಕಿಸ್ತಾನ ಎಂದು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.
ಸೆಪ್ಟೆಂಬರ್ 19 ರಂದು ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿದೆ. ಈ ಪಂದ್ಯಕ್ಕಾಗಿ ವಿಶ್ವವೇ ಎದುರು ನೋಡುತ್ತಿದೆ. ಕಳೆದ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಈ ಸಾಂಪ್ರದಾಯಿಕ ತಂಡಗಳೆರಡೂ ಮುಖಾಮುಖಿಯಾಗಿತ್ತು.
ಆ ಫೈನಲ್ ಪಂದ್ಯವನ್ನು ಕೊಹ್ಲಿ ನಾಯಕತ್ವದಲ್ಲಿ ಭಾರತ ಸೋತಿತ್ತು. ಈ ಸೋಲಿನ ಸೇಡು ತೀರಿಸಿಕೊಳ್ಳಲು ಟೀಂ ಇಂಡಿಯಾಕ್ಕೆ ಈಗ ಉತ್ತಮ ಅವಕಾಶ ಎದುರಾಗಿದೆ. ನಮ್ಮ ತಂಡ ಪಾಕಿಸ್ತಾನದ ವಿರುದ್ಧದ ಪಂದ್ಯವನ್ನು ಕಾತುರದಿಂದ ಕಾಯುತ್ತಿದೆ. ಈ ಪಂದ್ಯವನ್ನು ಗೆಲ್ಲುವುದು ನಮ್ಮ ಗುರಿಯಾಗಲಿದೆ ಎಂದು ನಾಯಕ ರೋಹಿತ್ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.