Publish Date: Sat, 12 Jun 2021 (09:54 IST)
Updated Date: Sat, 12 Jun 2021 (09:56 IST)
ಮುಂಬೈ: ಶ್ರೀಲಂಕಾ ಪ್ರವಾಸ ಮಾಡಲಿರುವ ಟೀಂ ಇಂಡಿಯಾಗೆ ನಾಯಕನಾಗುವ ಅದೃಷ್ಟ ಆರಂಭಿಕ ಶಿಖರ್ ಧವನ್ ಗೆ ಒಲಿದುಬಂದಿದೆ. ಇದರ ಬಗ್ಗೆ ಅವರು ಹೇಳಿದ್ದೇನು ಗೊತ್ತಾ?
ಶ್ರೀಲಂಕಾ ವಿರುದ್ಧ ಮುಂದಿನ ತಿಂಗಳು ನಡೆಯಲಿರುವ ಸೀಮಿತ ಓವರ್ ಗಳ ಸರಣಿಗೆ ಶಿಖರ್ ಧವನ್ ಭಾರತ ತಂಡದ ನೇತೃತ್ವ ವಹಿಸಲಿದ್ದಾರೆ. ಹಿರಿಯರ ತಂಡ ಇಂಗ್ಲೆಂಡ್ ನಲ್ಲಿ ಸರಣಿ ಆಡುತ್ತಿರಬೇಕಾದರೆ ಯುವಕರ ತಂಡವನ್ನು ಧವನ್ ಮುನ್ನಡೆಸಲಿದ್ದಾರೆ.
ಈ ಬಗ್ಗೆ ತಮ್ಮ ಖುಷಿ ಹಂಚಿಕೊಂಡಿರುವ ಅವರು ನನ್ನ ದೇಶದ ತಂಡಕ್ಕೆ ನಾಯಕನಾಗಿರುವುದಕ್ಕೆ ಖುಷಿಯಾಗಿದೆ. ನಿಮ್ಮೆಲ್ಲರ ಹಾರೈಕೆ ನನ್ನ ಮೇಲಿರಲಿ ಎಂದು ಧವನ್ ಕೇಳಿಕೊಂಡಿದ್ದಾರೆ.