Publish Date: Fri, 11 Jun 2021 (10:41 IST)
Updated Date: Fri, 11 Jun 2021 (10:43 IST)
ಮುಂಬೈ: ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದರ ಬೆನ್ನಲ್ಲೇ ಬಿಸಿಸಿಐ ಅಭಿಮಾನಿಗಳಿಗೆ ಮನವಿಯೊಂದನ್ನು ಮಾಡಿದೆ.
ತನ್ನ ಅಧಿಕೃತ ಟ್ವಿಟರ್ ಖಾತೆ ಮೂಲಕ ಅಭಿಮಾನಿಗಳಿಗೆ ಸಂದೇಶ ನೀಡಿರುವ ಬಿಸಿಸಿಐ, ವಿಶ್ವ ಚಾಂಪಿಯನ್ ಶಿಪ್ ಗೆ ಇನ್ನು ಒಂದೇ ವಾರ ಉಳಿದಿದೆ. ನ್ಯೂಜಿಲೆಂಡ್ ವಿರುದ್ಧ ಸೆಣಸಲಿರುವ ಟೀಂ ಇಂಡಿಯಾ ಜೊತೆಗೆ ಬೆಂಬಲವಾಗಿರಿ ಎಂದು ಮನವಿ ಮಾಡಿದೆ.
ಟೀಂ ಇಂಡಿಯಾ ಎಲ್ಲೇ ಹೋದರೂ ಅಭಿಮಾನಿಗಳ ಬೆಂಬಲ ಇದ್ದೇ ಇರುತ್ತದೆ. ಅಂತಹದ್ದರಲ್ಲಿ ಇದು ಚೊಚ್ಚಲ ಟೆಸ್ಟ್ ಚಾಂಪಿಯನ್ ಶಿಪ್ ಆಗಿರುವುದರಿಂದ ಕೊಹ್ಲಿ ಬಳಗಕ್ಕೆ ಗೆಲುವು ಪ್ರತಿಷ್ಠೆಯ ವಿಚಾರ. ಹೀಗಾಗಿ ಬಿಸಿಸಿಐ ಕೂಡಾ ಅಭಿಮಾನಿಗಳಿಗೆ ತಂಡವನ್ನು ಹುರಿದುಂಬಿಸಲು ಕೇಳಿಕೊಂಡಿದೆ.