Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಗ್ರೆಗ್ ಚಾಪೆಲ್ ರನ್ನು ಹಾಡಿಹೊಗಳಿದ ಸುರೇಶ್ ರೈನಾ

webdunia
ಶುಕ್ರವಾರ, 11 ಜೂನ್ 2021 (09:41 IST)
ಮುಂಬೈ: ಟೀಂ ಇಂಡಿಯಾದ ಒಂದು ಕಾಲದ ಕೋಚ್ ಆಗಿದ್ದ ಆಸ್ಟ್ರೇಲಿಯಾ ಮೂಲದ ಗ್ರೆಗ್ ಚಾಪೆಲ್ ರನ್ನು ಈಗಲೂ ಭಾರತೀಯ ಕ್ರಿಕೆಟಿಗರು ಇಷ್ಟಪಡಲ್ಲ. ಅಂದು ಭಾರತ ತಂಡದಲ್ಲಿ ಒಡಕು ಮೂಡಿಸಿದ ಕೋಚ್ ಎಂದೇ ಕುಖ್ಯಾತಿಗೊಳಗಾದ ಚಾಪೆಲ್ ರನ್ನು ಈಗ ಕ್ರಿಕೆಟಿಗ ಸುರೇಶ್ ರೈನಾ ಹಾಡಿ ಹೊಗಳಿದ್ದಾರೆ.


ಸಂದರ್ಶನವೊಂದರಲ್ಲಿ ಮಾತನಾಡಿರುವ ಸುರೇಶ್ ರೈನಾ ಚಾಪೆಲ್ ಭಾರತ ತಂಡಕ್ಕೆ ಗೆಲುವಿನ ಹಾದಿ ತಿಳಿಸಿಕೊಟ್ಟವರು. ಟೀಂ ಇಂಡಿಯಾ ಯಶಸ್ಸಿಗೆ ಅವರ ಕೊಡುಗೆ ಅಪಾರ ಎಂದಿದ್ದಾರೆ.

‘ನನ್ನ ಪ್ರಕಾರ ಭಾರತೀಯ ಕ್ರಿಕೆಟಿಗರ ಬೆಳವಣಿಗೆಗೆ ಗ್ರೆಗ್ ಚಾಪೆಲ್ ಕೊಡುಗೆ ಅಪಾರ. ಚಾಪೆಲ್ ಅಂದು ಬಿತ್ತಿದ ಬೀಜದ ಫಲವೇ 2011 ರ ವಿಶ್ವಕಪ್ ಗೆಲುವು. ಕೋಚ್ ಆಗಿದ್ದಾಗ ವಿವಾದದ ಹೊರತಾಗಿಯೂ ಅವರು ಭಾರತ ತಂಡಕ್ಕೆ ಗೆಲ್ಲುವುದು ಹೇಗೆಂದು ತಿಳಿಸಿಕೊಟ್ಟರು’ ಎಂದು ರೈನಾ ಅಭಿಪ್ರಾಯಪಟ್ಟಿದ್ದಾರೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia Hindi

ಮುಂದಿನ ಸುದ್ದಿ

ಲಂಕಾ ಸರಣಿಗೆ ಧವನ್ ನಾಯಕ, ದೇವದತ್ತ್ ಪಡಿಕ್ಕಲ್ ಗೆ ಟೀಂ ಇಂಡಿಯಾ ಕರೆ