Publish Date: Thu, 10 Jun 2021 (10:06 IST)
Updated Date: Thu, 10 Jun 2021 (10:08 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ರನ್ ಮೆಷಿನ್ ಎಂದು ಖ್ಯಾತಿ ಪಡೆದಿರಬಹುದು. ಆದರೆ ಈ ಬೌಲರ್ ಎದುರು ಆಡುವಾಗ ಯಾವಾಗಲೂ ಗೊಂದಲಕ್ಕೊಳಗಾಗುತ್ತಾರೆ ಎಂದು ಮಾಜಿ ವೇಗಿ ಇರ್ಫಾನ್ ಪಠಾಣ್ ಹೇಳಿದ್ದಾರೆ.
ಕೊಹ್ಲಿ ಯಾವ ಬೌಲರ್ ನ್ನು ಎದುರಿಸಲೂ ಭಯವಿರದು. ಆಸೀಸ್ ವೇಗಿ ಮಿಚೆಲ್ ಜಾನ್ಸನ್ ರನ್ನೂ ಆತ್ಮವಿಶ್ವಾಸದಿಂದಲೇ ಎದುರಿಸಬಹುದು. ಆದರೆ ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್ ಬಗ್ಗೆ ಕೇಳಿ ನೋಡಿ.
ಕೊಹ್ಲಿಗೆ ಆಂಡರ್ಸನ್ ಎದುರಿಸುವಾಗ ಯಾವತ್ತೂ ಗೊಂದಲ ಕಾಡುತ್ತದೆ. ಬೇಕಿದ್ದರೆ ಅವರನ್ನೇ ಕೇಳಿ ನೋಡಿ, ಆಂಡರ್ಸನ್ ಕೊಹ್ಲಿಗೆ ಭಯಹುಟ್ಟಿಸುವ ಬೌಲರ್ ಎಂದು ಪಠಾಣ್ ಅಭಿಪ್ರಾಯಪಟ್ಟಿದ್ದಾರೆ.