Publish Date: Fri, 14 Jun 2019 (09:12 IST)
Updated Date: Fri, 14 Jun 2019 (09:13 IST)
ಲಂಡನ್: ಆಸ್ಟ್ರೇಲಿಯಾ ವಿರುದ್ಧ ನಡೆದಿದ್ದ ವಿಶ್ವಕಪ್ ಪಂದ್ಯದಲ್ಲಿ ಹೆಬ್ಬರಳಿನ ಗಾಯಕ್ಕೊಳಗಾಗಿ ಮುಂದಿನ ಮೂರು ವಾರಗಳ ಕಾಲ ವಿಶ್ವಕಪ್ ನಿಂದ ಹೊರಬಿದ್ದಿರುವ ಶಿಖರ್ ಧವನ್ ಕಡೆಯಿಂದ ಗುಡ್ ನ್ಯೂಸ್ ಒಂದು ಸಿಕ್ಕಿದೆ.
ಧವನ್ ಗೆ ಮೂರು ವಾರಗಳ ವಿಶ್ರಾಂತಿ ಸೂಚಿಸಲಾಗಿದೆ. ಹೀಗಾಗಿ ಸದ್ಯಕ್ಕೆ ಅವರು ವಿಶ್ವಕಪ್ ಪಂದ್ಯಗಳಲ್ಲಿ ಆಡುವಂತಿಲ್ಲ. ಆದರೆ ಮೂರು ವಾರಗಳ ಬಳಿಕ ಮತ್ತೆ ಆಡಬಹುದು.
ಹೀಗಾಗಿ ಜೂನ್ 30 ರಂದು ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಲೀಗ್ ಪಂದ್ಯಕ್ಕೆ ಧವನ್ ಮರಳುವ ಸಾಧ್ಯತೆಯಿದೆ. ಹೀಗಾಗಿ ಭಾರತ ಸೆಮಿಫೈನಲ್ ಹಂತಕ್ಕೇರಿದರೂ ಆ ವೇಳೆಗೆ ಧವನ್ ಉಪಸ್ಥಿತರಿರಲಿದ್ದಾರೆ ಎನ್ನುವುದೇ ಅಭಿಮಾನಿಗಳಿಗೆ ಖುಷಿಪಡಲು ಸಿಕ್ಕಿರುವ ಕಾರಣ.