Select Your Language

Notifications

webdunia
webdunia
webdunia
webdunia

ವಿಶ್ವಕಪ್ ಕ್ರಿಕೆಟ್ 2019: ಅಭಿಮಾನಿಗಳ ತಾಳ್ಮೆ ಮಿತಿ ಮೀರಿ ಹೋಯ್ತು!

ವಿಶ್ವಕಪ್  ಕ್ರಿಕೆಟ್ 2019: ಅಭಿಮಾನಿಗಳ ತಾಳ್ಮೆ ಮಿತಿ ಮೀರಿ ಹೋಯ್ತು!
ಲಂಡನ್ , ಶುಕ್ರವಾರ, 14 ಜೂನ್ 2019 (09:05 IST)
ಲಂಡನ್: ಈ ಬಾರಿ ವಿಶ್ವಕಪ್ ಕ್ರಿಕೆಟ್ ಕೂಟದಲ್ಲಿ ಕ್ರಿಕೆಟಿಗರ ಆಟಕ್ಕಿಂತ ಮಳೆಯ ಕಾಟ ನೋಡುವುದರಲ್ಲೇ ಪ್ರೇಕ್ಷಕರು ಸುಸ್ತಾಗಿ ಹೋಗಿದ್ದಾರೆ. ಮಳೆಯಿಂದಾಗಿ ಆಟ ರದ್ದಾದ ಸುದ್ದಿ ನೋಡಿ ನೋಡಿ ಪ್ರೇಕ್ಷಕರ ತಾಳ್ಮೆ ಮಿತಿ ಮೀರಿದೆ.


ಇಂತಹಾ ಸಮಯದಲ್ಲಿ ಇಂಗ್ಲೆಂಡ್ ನಲ್ಲಿ ಟೂರ್ನಿ ನಡೆಸುವ ಅಗತ್ಯವಿತ್ತಾ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. ಟ್ವಿಟರ್, ಫೇಸ್ ಬುಕ್ ಮುಖಾಂತರ ತಮ್ಮ ಅಸಮಾಧಾನ ಹೊರ ಹಾಕುತ್ತಿದ್ದಾರೆ.

ಪದೇ ಪದೇ ಮಳೆಯಿಂದಾಗಿ ಪಂದ್ಯ ರದ್ದು ಎನ್ನುವ ಸುದ್ದಿ ನೋಡಿ ನೋಡಿ ಪ್ರೇಕ್ಷಕರ ತಾಳ್ಮೆ ಕೆಟ್ಟು ಹೋಗಿದೆ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಇದನ್ನೇ ಜೋಕ್ ಆಗಿ ಬಳಸಿಕೊಳ್ಳುತ್ತಿದ್ದಾರೆ. ವಿಶ್ವಕಪ್ ಕ್ರಿಕೆಟ್ ಕೂಟವನ್ನು ಇಷ್ಟು ತಡವಾಗಿ ಅಂದರೆ ಮಳೆಗಾಲದಲ್ಲಿ ಅದೂ ಇಂಗ್ಲೆಂಡ್ ನಲ್ಲಿ ಆಯೋಜಿಸಿದ್ದಕ್ಕೆ ಐಸಿಸಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಹೀಗಾಗಿ ರೋಚಕತೆ ಪಡೆದುಕೊಳ್ಳಬೇಕಿದ್ದ ವಿಶ್ವಕಪ್ ಕೂಟದ ಬಗ್ಗೆ ಈಗ ಆಕ್ರೋಶ ಮನೆ ಮಾಡಿದೆ. ಅಷ್ಟೇ ಅಲ್ಲ, ಮಳೆಯಿಂದಾಗಿ ಹಲವು ತಂಡಗಳು ವಿನಾಕಾರಣ ಅಂಕ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ಅಲ್ಲದೆ, ಕೆಲವು ತಂಡಗಳಿಗೆ ಮುಂದಿನ ಹಂತಕ್ಕೆ ತೇರ್ಗಡೆಯಾಗುವ ಅವಕಾಶವೇ ವ್ಯರ್ಥವಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವಕಪ್ ಕ್ರಿಕೆಟ್ 2019: ಟೀಂ ಇಂಡಿಯಾಕ್ಕೆ ಪಾಕ್ ನಾಯಕನ ಎಚ್ಚರಿಕೆ