Publish Date: Thu, 13 Jun 2019 (16:57 IST)
Updated Date: Thu, 13 Jun 2019 (17:00 IST)
ಲಂಡನ್: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಇಂದು ನಡೆಯಬೇಕಿದ್ದ ವಿಶ್ವಕಪ್ ಪಂದ್ಯಕ್ಕೆ ವರುಣನ ಆಗಮನವಾಗಿದೆ. ಹೀಗಾಗಿ ಪಂದ್ಯ ಇನ್ನೂ ಆರಂಭವಾಗಿಲ್ಲ.
ಮಳೆಯಿಂದಾಗಿ ಟಾಸ್ ಕೂಡಾ ನಡೆದಿಲ್ಲ. ಇದು ಕಾತುರದಿಂದ ಮೈದಾನಕ್ಕೆ ಆಗಮಿಸುವ ವೀಕ್ಷಕರಿಗೆ ನಿರಾಶೆಯುಂಟು ಮಾಡಿದೆ. ಈ ವಿಶ್ವಕಪ್ ಕೂಟದಲ್ಲಿ ಹಲವು ಪಂದ್ಯಗಳು ಮಳೆಯಿಂದಾಗಿ ನಡೆದಿಲ್ಲ. ವಿಪರ್ಯಾಸವೆಂದರೆ ನ್ಯೂಜಿಲೆಂಡ್ ಗೆ ಇದು ಎರಡನೇ ಪಂದ್ಯ ಮಳೆಗೆ ಆಹುತಿಯಾಗುತ್ತಿದೆ.
ಒಂದು ವೇಳೆ ತಡವಾಗಿ ಪಂದ್ಯ ಆರಂಭವಾದರೆ ಡಕ್ ವರ್ತ್ ಲೂಯಿಸ್ ನಿಯಮದ ಪ್ರಕಾರ ಓವರ್ ಕಡಿತವಾಗಬಹುದು. ಪಂದ್ಯವೇ ರದ್ದಾದರೆ ಉಭಯ ತಂಡಗಳು ತಲಾ 2 ಅಂಕ ಹಂಚಿಕೊಳ್ಳಬೇಕಾಗುತ್ತದೆ.