Select Your Language

Notifications

webdunia
webdunia
webdunia
webdunia

ವಿಶ್ವಕಪ್ 2019: ತಂಡಗಳಿಗಿಂತ ಅಂಕಪಟ್ಟಿಯಲ್ಲಿ ಮಳೆ ಗಳಿಸಿದ ಅಂಕವೇ ಹೆಚ್ಚು!

ವಿಶ್ವಕಪ್ 2019: ತಂಡಗಳಿಗಿಂತ ಅಂಕಪಟ್ಟಿಯಲ್ಲಿ ಮಳೆ ಗಳಿಸಿದ ಅಂಕವೇ ಹೆಚ್ಚು!
ಲಂಡನ್ , ಶುಕ್ರವಾರ, 14 ಜೂನ್ 2019 (08:55 IST)
ಲಂಡನ್: ವಿಶ್ವಕಪ್ ಕ್ರಿಕೆಟ್ 2019 ರಲ್ಲಿ ನಿನ್ನೆ ಭಾರತ-ನ್ಯೂಜಿಲೆಂಡ್ ಪಂದ್ಯವೂ ಮಳೆಗೆ ಆಹುತಿಯಾಗುವುದರೊಂದಿಗೆ ಒಟ್ಟು ನಾಲ್ಕು ಪಂದ್ಯಗಳು ಸಂಪೂರ್ಣ ರದ್ದಾದಂತಾಗಿದೆ.


ಇದರೊಂದಿಗೆ ವಿಶ್ವಕಪ್ ಅಂಕಪಟ್ಟಿಯಲ್ಲಿ ನಂ.1 ಸ್ಥಾನ ಮಳೆಯದ್ದು ಎಂಬಂತಾಗಿದೆ. ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ನ್ಯೂಜಿಲೆಂಡ್ 4 ಪಂದ್ಯಗಳಲ್ಲಿ 3 ಗೆಲುವು, 1 ರದ್ದು ಆಗಿ ಒಟ್ಟು 7 ಅಂಕ ಗಳಿಸಿದೆ. ಆದರೆ ಮಳೆ ಒಟ್ಟು ನಾಲ್ಕು ಪಂದ್ಯಗಳನ್ನು ರದ್ದು ಮಾಡಿ 8 ಅಂಕಗಳನ್ನು ಪಡೆದಂತಾಗಿದೆ!

ಅಂಕಪಟ್ಟಿಯಲ್ಲಿ ಭಾರತ ಇದೀಗ 3 ಪಂದ್ಯಗಳಿಂದ ಒಂದೂ ಸೋಲು ಕಾಣದೇ 5 ಅಂಕಗಳನ್ನು ಹೊಂದಿದೆ. ಭಾನುವಾರ ಪಾಕಿಸ್ತಾನದ ವಿರುದ್ಧ ಜಿದ್ದಾ ಜಿದ್ದಿನ ಪಂದ್ಯವಿದ್ದು, ಅದಕ್ಕೂ ಮಳೆ ಅವಾಂತರ ಸೃಷ್ಟಿಸದಿದ್ದರೆ ಸಾಕು ಎನ್ನುವುದೇ ಅಭಿಮಾನಿಗಳ ಪ್ರಾರ್ಥನೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವಕಪ್ ಕ್ರಿಕೆಟ್ 2019: ಟೀಂ ಇಂಡಿಯಾ-ಕೀವೀಸ್ ಪಂದ್ಯಕ್ಕೆ ಅನಪೇಕ್ಷಿತ ಅತಿಥಿ ಆಗಮನ!