Publish Date: Mon, 25 May 2020 (09:22 IST)
Updated Date: Mon, 25 May 2020 (09:24 IST)
ಮುಂಬೈ: ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್ ಮನ್ ಶಿಖರ್ ಧವನ್ ಈಗ ತುಂಬಿದ ಮೈದಾನದಲ್ಲಿ ಕ್ರಿಕೆಟ್ ಪಂದ್ಯ ಆಡಲು ಅವಕಾಶ ಸಿಕ್ಕರೆ ಸಾಕು ಎಂದು ಕಾಯ್ತಿದ್ದಾರಂತೆ!
ಹೀಗಂತ ಶ್ರೀಲಂಕಾ ಕ್ರಿಕೆಟಿಗ ಆಂಜಲೋ ಮ್ಯಾಥ್ಯೂಸ್ ಜತೆಗೆ ಸೋಷಿಯಲ್ ಮೀಡಿಯಾದಲ್ಲಿ ನಡೆಸಿದ ಲೈವ್ ಚ್ಯಾಟ್ ನಲ್ಲಿ ಹೇಳಿಕೊಂಡಿದ್ದಾರೆ.
ಕೊರೋನಾದಿಂದಾಗಿ ಹೆಚ್ಚು ಕಡಿಮೆ 2 ತಿಂಗಳಿನಿಂದ ಕ್ರಿಕೆಟ್ ಮೈದಾನಕ್ಕಿಳಿದಿಲ್ಲ. ಇನ್ನು ಕ್ರಿಕೆಟ್ ಪಂದ್ಯ ಯಾವಾಗ ನಡೆಯುತ್ತದೆ ಎಂಬುದು ಸ್ಪಷ್ಟವಾಗಿಲ್ಲ. ಒಂದು ವೇಳೆ ನಡೆದರೂ ಖಾಲಿ ಮೈದಾನದಲ್ಲಿ ಆಡಲು ಅವಕಾಶ ಸಿಗಬಹುದಷ್ಟೇ. ಹೀಗಾಗಿ ಧವನ್ ಗೆ ಈಗ ಪ್ರೇಕ್ಷಕರ ಎದುರು ಆಡುವ ಆಸೆಯಾಗಿದೆಯಂತೆ.
ನಾವೀಗ ಆಡುವ ಹಸಿವಿನಲ್ಲಿದ್ದೇವೆ. ಒಮ್ಮೆ ಅವಕಾಶ ಸಿಕ್ಕರೆ ಸಾಕು. ತುಂಬಿದ ಮೈದಾನದಲ್ಲಿ ಆಡುವ ಉತ್ಸಾಹವೇ ಬೇರೆ. ಅಂತಹದ್ದೊಂದು ದಿನಕ್ಕಾಗಿ ಕಾಯುತ್ತಿದ್ದೇನೆ ಎಂದು ಧವನ್ ಹೇಳಿಕೊಂಡಿದ್ದಾರೆ.