ವಿದೇಶೀ ಲೀಗ್ ನಲ್ಲಿ ಆಡಲು ಅವಕಾಶ ಕೊಡದ ಬಿಸಿಸಿಐ ವಿರುದ್ಧ ರಾಬಿನ್ ಉತ್ತಪ್ಪ ಅಸಮಾಧಾನ

ಶುಕ್ರವಾರ, 22 ಮೇ 2020 (10:40 IST)
ಮುಂಬೈ: ಪ್ರಸಕ್ತ ಬಿಸಿಸಿಐ ತನ್ನ ದೇಶದ ಕ್ರಿಕೆಟಿಗರಿಗೆ ವಿದೇಶೀ ಕ್ರಿಕೆಟ್ ಲೀಗ್ ಗಳಲ್ಲಿ ಭಾಗವಹಿಸಲು ಅವಕಾಶ ನೀಡುತ್ತಿಲ್ಲ. ಈ ನಿಯಮದಿಂದಾಗಿ ಟೀಂ ಇಂಡಿಯಾ ಕ್ರಿಕೆಟಿಗರು ಹೊರದೇಶದ ಕ್ರಿಕೆಟ್ ಲೀಗ್ ಗಳಲ್ಲಿ ಭಾಗವಹಿಸಲು ಸಾಧ‍್ಯವಾಗುತ್ತಿಲ್ಲ.


ಈ ನಿಯಮದ ಬಗ್ಗೆ ಇದೀಗ ಕರ್ನಾಟಕ ಮಾಜಿ ರಣಜಿ ಆಟಗಾರ ರಾಬಿನ್ ಉತ್ತಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಮಗೆ ಹೊರದೇಶದ ಲೀಗ್ ಗಳಲ್ಲಿ ಭಾಗವಹಿಸಲು ಅವಕಾಶ ನೀಡದೇ ಇರುವುದು ನೋವು ತಂದಿದೆ ಎಂದು ಉತ್ತಪ್ಪ ಹೇಳಿಕೊಂಡಿದ್ದಾರೆ.

ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಬಿಸಿಸಿಐನ ಈ ನಿಯಮದ ವಿರುದ್ಧ ಉತ್ತಪ್ಪ ಅಸಮಾಧಾನ ಹೊರಹಾಕಿದ್ದಾರೆ. ‘ದಯವಿಟ್ಟು ನಮ್ಮನ್ನು ಹೋಗಲು ಬಿಡಿ. ಇದು ನಮಗೆ ನೋವು ತರುತ್ತಿದೆ. ಹೊರಗೆ ಹೋಗಿ ಆಡುವುದರಿಂದ ಕ್ರೀಡೆಯ ವಿದ್ಯಾರ್ಥಿಯಾಗಿ ನಮಗೆ ಕಲಿಯಲು ಹಲವು ಅವಕಾಶ ಸಿಗುತ್ತದೆ’ ಎಂದು ಉತ್ತಪ್ಪ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಒಳಗೆ ಹಾಕಿಸ್ಬೇಕಾ? ವಿರಾಟ್ ಕೊಹ್ಲಿಯ ಡೈನಾಸರ್ ವಿಡಿಯೋಗೆ ಅರಣ್ಯ ಇಲಾಖೆ ಪ್ರತಿಕ್ರಿಯೆ!