Publish Date: Fri, 07 Sep 2018 (09:02 IST)
Updated Date: Fri, 07 Sep 2018 (09:04 IST)
ಲಂಡನ್: ಇಂಗ್ಲೆಂಡ್ ವಿರುದ್ಧ ಸರಣಿ ಸೋತು ಕಳಪೆ ಪ್ರದರ್ಶನ ನೀಡಿರುವ ಟೀಂ ಇಂಡಿಯಾವನ್ನು ಟ್ರೋಲ್ ಮಾಡಲು ಹೊರಟವರಿಗೆ ಆರಂಭಿಕ ಶಿಖರ್ ಧವನ್ ಇನ್ ಸ್ಟಾಗ್ರಾಂನಲ್ಲಿ ತಕ್ಕ ತಿರುಗೇಟು ನೀಡಿದ್ದಾರೆ.
ಶಿಖರ್ ಧವನ್ ತಮ್ಮ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಸಹ ಆಟಗಾರರೊಂದಿಗಿನ ತಮಾಷೆಯ ಕ್ಷಣಗಳ ಫೋಟೋ ಒಂದನ್ನು ಅಪ್ ಲೋಡ್ ಮಾಡಿದ್ದರು. ಇದಕ್ಕೆ ಕೆಲವರು ಟೀಕೆ ಮಾಡಿ ಕಾಮೆಂಟ್ ಮಾಡುತ್ತಿದ್ದರು. ಇದಕ್ಕೆ ಧವನ್ ಪ್ರತಿಕ್ರಿಯಿಸಿದ್ದು, ತಿರುಗೇಟು ಕೊಟ್ಟಿದ್ದಾರೆ.
‘ನಿಮ್ಮಷ್ಟೇ ನಮಗೂ ಸೋಲಿನಿಂದ ಬೇಸರವಾಗಿದೆ. ಹಾಗಂತ ಬದುಕಿನ ಸಣ್ಣ ಪುಟ್ಟ ಸಂತೋಷವನ್ನು ಅನುಭವಿಸದೇ ಇರಲು ಸಾಧ್ಯವಿಲ್ಲ. ಭೂತಕಾಲದ ಬಗ್ಗೆ ಯೋಚಿಸುತ್ತಾ ಭವಿಷ್ಯವನ್ನು ಮರೆಯುವುದು ಸರಿಯಲ್ಲ. ಹಿಂದೆ ಕೆಟ್ಟದಾಗಿ ಪ್ರದರ್ಶನ ನೀಡಿದ್ದರೆ, ಮುಂದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಲು ಮೈದಾನದಲ್ಲಿ ಕಠಿಣ ಪರಿಶ್ರಮಪಡುತ್ತೇವೆ. ಎಲ್ಲಕ್ಕಿಂತ ಹೆಚ್ಚು ನಗುತ್ತಾ ಧನಾತ್ಮಕವಾಗಿ ಇರುವುದು ಮುಖ್ಯ. ಅದನ್ನೇ ನಾವು ಮಾಡುತ್ತಿದ್ದೇವೆ. ನಮ್ಮನ್ನು ನಿಜವಾಗಿಯೂ ಬೆಂಬಲಿಸುವ ಅಭಿಮಾನಿಗಳಿಗೆ ವಂದನೆಗಳು’ ಎಂದು ಧವನ್ ಸುದೀರ್ಘವಾಗಿ ಬರೆದು ತಿರುಗೇಟು ಕೊಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.