ಲಂಡನ್: ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಇಂಗ್ಲೆಂಡ್ ನ ಖ್ಯಾತ ಕ್ರಿಕೆಟಿಗ ಅಲೆಸ್ಟರ್ ಕುಕ್ ಕನಸಿನ ತಂಡ ಘೋಷಿಸಿದ್ದು, ಒಬ್ಬನೇ ಒಬ್ಬ ಭಾರತೀಯ ಸ್ಥಾನ ಪಡೆದಿಲ್ಲ!
									
			
			 
 			
 
 			
					
			        							
								
																	ಐಸಿಸಿ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಕುಕ್ ತಾವು ಆಡಿದ, ಎದುರಿಸಿದ ಆಟಗಾರರನ್ನೊಳಗೊಂಡ 11 ಮಂದಿ ಆಟಗಾರರ ಪಟ್ಟಿ ಮಾಡಿದ್ದಾರೆ. ಈ ತಂಡಕ್ಕೆ ಇಂಗ್ಲೆಂಡ್ ನ ಮಾಜಿ ನಾಯಕ ಗ್ರಹಾಂ ಗೂಚ್ ರನ್ನು ನಾಯಕರಾಗಿ ಆಯ್ಕೆ ಮಾಡಿದ್ದಾರೆ.
									
										
								
																	ಆಸ್ಟ್ರೇಲಿಯಾದ ಮ್ಯಾಥ್ಯೂ ಹೇಡನ್, ಬ್ರಿಯಾನ್ ಲಾರಾ, ರಿಕಿ ಪಾಂಟಿಂಗ್, ಕುಮಾರ್ ಸಂಗಕ್ಕಾರ, ಎಬಿಡಿ ವಿಲಿಯರ್ಸ್, ಮುತ್ತಯ್ಯ ಮುರಳೀಧರನ್, ಜೇಮ್ಸ್ ಆಂಡರ್ಸನ್, ಗ್ಲೆನ್ ಮೆಕ್ ಗ್ರಾತ್ ಮುಂತಾದ ಮಹಾನ್ ಕ್ರಿಕೆಟಿಗರು ಸ್ಥಾನ ಪಡೆದಿದ್ದಾರೆ. ಆದರೆ ಭಾರತದ ಯಾವುದೇ ದಿಗ್ಗಜ ಕ್ರಿಕೆಟಿಗನಿಗೂ ಸ್ಥಾನ ನೀಡದೇ ಇರುವುದು ಅಚ್ಚರಿ ತಂದಿದೆ.
									
											
							                     
							
							
			        							
								
																	ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.