ಟೀಂ ಇಂಡಿಯಾ ಬ್ಯಾಟಿಂಗ್ ಕೋಚ್ ಆಗಲು ಒಪ್ಪಿದ್ದ ರಾಹುಲ್ ದ್ರಾವಿಡ್! ಆದರೆ ಆಮೇಲೆ ಏನಾಗಿತ್ತು ಗೊತ್ತಾ?!

ಗುರುವಾರ, 6 ಸೆಪ್ಟಂಬರ್ 2018 (08:54 IST)
ಮುಂಬೈ: ಟೀಂ ಇಂಡಿಯಾ ಇಂಗ್ಲೆಂಡ್ ನಲ್ಲಿ ದಯನೀಯ ವೈಫಲ್ಯ ಕಂಡ ಬಳಿಕ ಇದೀಗ ಕೋಚ್ ರವಿಶಾಸ್ತ್ರಿ ಮೇಲೆ ಭಾರೀ ಟೀಕೆ ಕೇಳಿಬರುತ್ತಿದೆ. ಇದರ ನಡುವೆ ಬಿಸಿಸಿಐ ಕ್ರಿಕೆಟ್ ಸಲಹಾ ಸಮಿತಿ ಸದಸ್ಯರಾಗಿರುವ ಸೌರವ್ ಗಂಗೂಲಿ ಸ್ಪೋಟಕ ರಹಸ್ಯವೊಂದನ್ನು ಬಾಯ್ಬಿಟ್ಟಿದ್ದಾರೆ.

ಟೀಂ ಇಂಡಿಯಾಗೆ ಕೋಚ್ ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಸಚಿನ್, ವಿವಿಎಸ್ ಮತ್ತು ಗಂಗೂಲಿ ನೇತೃತ್ವದ ಸಮಿತಿ ರವಿಶಾಸ್ತ್ರಿ ಜತೆಗೆ ಬ್ಯಾಟಿಂಗ್ ಕೋಚ್ ಆಗಿ ರಾಹುಲ್ ದ್ರಾವಿಡ್ ರನ್ನು ಮತ್ತು ಬೌಲಿಂಗ್ ಕೋಚ್ ಆಗಿ ಜಹೀರ್ ಖಾನ್ ರನ್ನು ಆಯ್ಕೆ ಮಾಡಿತ್ತು.

ಆದರೆ ಕೆಲವು ಗೊಂದಲಗಳ ನಂತರ ರವಿಶಾಸ್ತ್ರಿ ಒತ್ತಡದ ಮೇರೆ ಸಂಜಯ್ ಬಂಗಾರ್ ಮತ್ತು ಭರತ್ ಅರುಣ್ ರನ್ನು ಈ ಸ್ಥಾನಕ್ಕೆ  ಪಕ್ಕಾ ಮಾಡಲಾಯಿತು. ಆದರೆ ಸಚಿನ್, ಸೌರವ್, ಲಕ್ಷ್ಮಣ್ ನೇತೃತ್ವದ ಸಮಿತಿ ರಾಹುಲ್ ದ್ರಾವಿಡ್ ಬಳಿ ಮೊದಲು ಕೇಳಿಕೊಂಡಿದ್ದಾಗ ದ್ರಾವಿಡ್ ಬ್ಯಾಟಿಂಗ್ ಕೋಚ್ ಆಗಲು ಒಪ್ಪಿಕೊಂಡಿದ್ದರಂತೆ. ಆದರೆ ರವಿಶಾಸ್ತ್ರಿ ಬಳಿ ದ್ರಾವಿಡ್ ಮಾತುಕತೆ ನಡೆಸಿದ ಮೇಲೆ ಇದ್ದಕ್ಕಿದ್ದಂತೆ ದ್ರಾವಿಡ್ ಈ ಹುದ್ದೆಯಿಂದ ಹಿಂದೆ ಸರಿದರಂತೆ. ದ್ರಾವಿಡ್ ಮತ್ತು ಶಾಸ್ತ್ರಿ ನಡುವೆ ಅಂತಹ ಮಾತುಕತೆ ಏನು ನಡೆಯಿತು ಎಂದು ನನಗೆ ಗೊತ್ತಿಲ್ಲ ಎಂದು ಗಂಗೂಲಿ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸ್ಪೋಟಕ ಮಾಹಿತಿ ಹೊರಹಾಕಿದ್ದಾರೆ.

ಇದೀಗ ಅಂದು ನಡೆದ ಕೋಚ್ ಆಯ್ಕೆ ಪ್ರಕ್ರಿಯೆಯ ಗೊಂದಲಕ್ಕೆ ಮತ್ತಷ್ಟು ತುಪ್ಪ ಸುರಿದಂತಾಗಿದೆ. ಗಂಗೂಲಿ ಹೇಳಿಕೆ ಇದೀಗ ರವಿಶಾಸ್ತ್ರಿ ಮೇಲೆ ಮತ್ತಷ್ಟು ಅನುಮಾನ ಹುಟ್ಟಿಸುವಂತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೋಚ್ ಬಳಗಕ್ಕೆ ಹೊಸ ಸೇರ್ಪಡೆ