Publish Date: Thu, 06 Sep 2018 (09:10 IST)
Updated Date: Thu, 06 Sep 2018 (09:11 IST)
ಸೌಥಾಂಪ್ಟನ್: ಒಂದು ಸರಣಿ ಸೋಲು ಎನ್ನುವುದು ಆಟಗಾರರಿಗೆ ಎಂತೆಂತಹಾ ಅವಮಾನ ಅನುಭವಿಸಬೇಕಾಗುತ್ತದೆ ಎನ್ನುವುದಕ್ಕೆ ಇದುವೇ ಸಾಕ್ಷಿ.
ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಸೋತ ಬೆನ್ನಲ್ಲೇ ಮಾಜಿ, ಹಾಲಿ ಕ್ರಿಕೆಟಿಗರು ಟೀಂ ಇಂಡಿಯಾ ಮೇಲೆ ಟೀಕಾಪ್ರಹಾರವನ್ನೇ ನಡೆಸುತ್ತಿದ್ದಾರೆ.
ಇದೀಗ ಟೀಂ ಇಂಡಿಯಾ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್, ತಮ್ಮ ಸಹವರ್ತಿ ರವಿಚಂದ್ರನ್ ಅಶ್ವಿನ್ ಗೆ ಟಾಂಗ್ ಕೊಟ್ಟಿದ್ದಾರೆ. ಮೊದಲ ಪಂದ್ಯದಲ್ಲಿ ಭರ್ಜರಿ ಆಟ ಪ್ರದರ್ಶಿಸಿದ್ದ ಅಶ್ವಿನ್ ನಂತರದ ಪಂದ್ಯಗಳಲ್ಲಿ ಪೇಲವವಾಗಿದ್ದರು. ಇದರ ಬಗ್ಗೆ ಟಾಂಗ್ ಕೊಟ್ಟಿರುವ ಭಜಿ ಸ್ಪಿನ್ನರ್ ಗಳಿಂದಲೇ ಭಾರತ ಸೋತಿತು ಎಂದು ಕಿಡಿ ಕಾರಿದ್ದಾರೆ.
‘ಸೌಥಾಂಪ್ಟನ್ ಪಿಚ್ ಆಫ್ ಸ್ಪಿನ್ನರ್ ಗಳಿಗೆ ಸಾಕಷ್ಟು ನೆರವು ನೀಡುತ್ತಿತ್ತು. ಹಾಗಿದ್ದರೂ ಭಾರತದ ಸ್ಪಿನ್ನರ್ ಗಳು ವಿಕೆಟ್ ಗಳಿಸಲಿಲ್ಲ. ಅದನ್ನೇ ಇಂಗ್ಲೆಂಡ್ ನ ಸ್ಪಿನ್ನರ್ ಮೊಯಿನ್ ಅಲಿ ಮಾಡಿ ತೋರಿಸಿದರು. ಆದರೆ ಟೀಂ ಇಂಡಿಯಾ ಸ್ಪಿನ್ನರ್ ಅಶ್ವಿನ್ ಕೈಲಾಗಲಿಲ್ಲ. ಅಶ್ವಿನ್ ಗಿಂತ ಚೆನ್ನಾಗಿ ಇಂಗ್ಲೆಂಡ್ ಸ್ಪಿನ್ನರ್ ಗಳು ಬಾಲ್ ಮಾಡಿದರು. ಇದೇ ಕಾರಣಕ್ಕೆ ಟೀಂ ಇಂಡಿಯಾ ಸೋತಿತು’ ಎಂದು ಭಜಿ ಅಶ್ವಿನ್ ಗೆ ಟಾಂಗ್ ಕೊಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.