Publish Date: Sun, 05 Jul 2020 (10:06 IST)
Updated Date: Sun, 05 Jul 2020 (10:07 IST)
ಇಸ್ಲಾಮಾಬಾದ್: ಭಾರತದ ವಿರುದ್ಧ ಸದಾ ವಿವಾದಾತ್ಮಕ ಹೇಳಿಕೆ ನೀಡುವ ಶಾಹಿದ್ ಅಫ್ರಿದಿ ಸಂದರ್ಶನವೊಂದರಲ್ಲಿ ಮತ್ತೆ ಅಂತಹದ್ದೇ ಹೇಳಿಕೆ ನೀಡಿದ್ದಾರೆ.
ಭಾರತೀಯ ಕ್ರಿಕೆಟ್ ತಂಡವನ್ನು ಹಲವು ಬಾರಿ ನಾವು ಸೋಲಿಸಿದ್ದೇವೆ. ಪ್ರತೀ ಬಾರಿ ಸೋತ ಬಳಿಕವೂ ಭಾರತೀಯ ಕ್ರಿಕೆಟಿಗರು ನಮ್ಮ ಬಳಿ ಕ್ಷಮಿಸಿ ಎಂದು ಗೋಗೆರೆಯುತ್ತಿದ್ದರು ಎಂದು ಅಫ್ರಿದಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅಸಲಿಗೆ ಭಾರತ ಹಲವು ಬಾರಿ ಪಾಕಿಸ್ತಾನಕ್ಕೆ ಮಣ್ಣು ಮುಕ್ಕಿಸಿದೆ. ಹಾಗಾಗಿ ಅಪ್ರಿದಿಯ ಈ ಹೇಳಿಕೆ ನಗೆಪಾಟಲಿಗೀಡಾಗಿದೆ.