Select Your Language

Notifications

webdunia
webdunia
webdunia
webdunia

ಸಾನಿಯಾ ಮಿರ್ಜಾ, ಮೊಹಮ್ಮದ್ ಶಮಿ ವಿವಾಹ ಸುದ್ದಿಗೆ ಸಖತ್ ಟ್ವಿಸ್ಟ್

Sania Mirza's father Imran

Sampriya

ಮುಂಬೈ , ಶುಕ್ರವಾರ, 21 ಜೂನ್ 2024 (18:05 IST)
Photo Courtesy X
ಮುಂಬೈ: ಪಾಕ್ ಕ್ರಿಕೆಟಿಗ ಶೋಯೆಬ್ ಮಲಿಕ್ ಜತೆಗಿನ ವಿಚ್ಛೇಧನದ ಬಳಿಕ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಕ್ರಿಕೆಟಿಗ ಮೊಹಮ್ಮದ್ ಶಮಿ ಅವರ ನಡುವಿನ ಮದುವೆ ವಿಚಾರ ಸಖತ್ ವೈರಲ್ ಆಗಿದೆ.

ಸಾನಿಯಾ ಮಿರ್ಜಾ ಅವರು ಪಾಕ್ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರನ್ನು 2010ರಲ್ಲಿ ವಿವಾಹವಾದರು. ಈ ಜೋಡಿಗೆ ಇಜಾನ್ ಎಂಬ ಮಗನಿದ್ದಾನೆ. ಬಳಿಕ ಕಾಣಿಸಿಕೊಂಡ ವೈಯಕ್ತಿಕ ಕಾರಣಗಳಿಂದ ಈ ಜೋಡಿ ವಿಚ್ಛೇಧನ ಪಡೆದು ದೂರವಾಗಿದೆ. ಅದಲ್ಲದೆ ಶೋಯೆಬ್ ಮಲಿಕ್ ಅವರು ಸನಾ ಜಾವೇದ್ ಅವರನ್ನು 2024ರ ಮಾರ್ಚ್‌ನಲ್ಲಿ ವಿವಾಹವಾದರು. ಶೋಯೆಬ್ ಮಲಿಕ್ ವಿವಾಹದ ಬೆನ್ನಲ್ಲೇ ಸಾನಿಯಾ ಮಿರ್ಜಾ ಅವರು ಕೂಡಾ ಮರು ಮದುವೆಯಾಗುವ ಸುದ್ದಿ ವೈರಲ್ ಆಗಿತ್ತು.

ಅದಲ್ಲದೆ ಭಾರತದ ಕ್ರಿಕೆಟಿಗೆ ಮೊಹಮ್ಮದ್ ಶಮಿ ಜತೆ ಸಾನಿಯಾ ಮಿರ್ಜಾ ಅವರು ತಮ್ಮ ಮುಂದಿನ ಬದುಕು ಕಟ್ಟಿಕೊಳ್ಳಲಿದ್ದಾರೆಂಬ ಸುದ್ದಿ ಹಾರಿದಾಡಿತ್ತು. ಇವರಿಬ್ಬರ ಎಐ ರಚಿತವಾದ ಚಿತ್ರ ವೈರಲ್ ಆಗಿದೆ.

ಸಾಮಾಜಿಕ ಮಾಧ್ಯಮ ಬಳಕೆದಾರರು ಇಬ್ಬರೂ ಕ್ರೀಡಾಪಟುಗಳ ಕೆಲವು ಮಾರ್ಫ್ ಮಾಡಿದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಇನ್ನು ಸಾನಿಯಾ ಹಾಗು ಮೊಹಮ್ಮದ್ ಶಮಿತಾ ಅವರ ಮದುವೆ ವದಂತಿ ಬಗ್ಗೆ ಪ್ರತಿಕ್ರಿಯಿಸಿದ ಸಾನಿಯಾ ತಂದೆ ಇಮ್ರಾನ್ ಅವರು, ಈ ಸುದ್ದಿಗಳು ಸತ್ಯಕ್ಕೆ ದೂರವಾದದ್ದು, ಸಾನಿಯಾ ಇದುವರೆಗೂ ಆತನನ್ನು ಭೇಟಿಯಾಗಿಲ್ಲೆ ಎಂದು ಸ್ಪಷ್ಟಣೆ ನೀಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಪ್ಯಾಟ್‌ ಕಮಿನ್ಸ್ ಹ್ಯಾಟ್ರಿಕ್ ಸಾಧನೆ: ಮಳೆಯ ನಡುವೆಯೂ ಬಾಂಗ್ಲಾ ವಿರುದ್ಧ ಗೆದ್ದ ಆಸ್ಟ್ರೇಲಿಯಾ