Select Your Language

Notifications

webdunia
webdunia
webdunia
webdunia

ದ ಆಫ್ರಿಕಾ ವಿರುದ್ಧ ಚಿನ್ನಸ್ವಾಮಿ ಅಂಗಳದಲ್ಲಿ ಆರ್ ಸಿಬಿ ಕ್ವೀನ್ ಸ್ಮೃತಿ ಮಂಧಾನ ಎರಡನೇ ಶತಕ

smiri mandhana

Sampriya

ಬೆಂಗಳೂರು , ಬುಧವಾರ, 19 ಜೂನ್ 2024 (16:35 IST)
Photo Courtesy X
ಬೆಂಗಳೂರು: ಭಾರತ ಹಾಗೂ ದಕ್ಷಿಣ ಆಫ್ರಿಕಾ ವನಿತಾ ತಂಡಗಳ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಟೀ ಇಂಡಿಯಾ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಸತತ ಎರಡನೇ ಶತಕ ಬಾರಿಸಿದ್ದಾರೆ.

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯಾಟದಲ್ಲಿ ಶತಕ ಬಾರಿಸುವ ಮೂಲಕ  ಮಂಧಾನ ಅವರಿಗೆ ಇದು ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 7ನೇ ಶತಕವಾಗಿದೆ.

ಮೊದಲ ಏಕದಿನ ಪಂದ್ಯದಂತೆ ಎರಡನೇ ಏಕದಿನ ಪಂದ್ಯದಲ್ಲೂ ಅದ್ಭುತ ಇನ್ನಿಂಗ್ಸ್ ಕಟ್ಟಿರುವ ಸ್ಮೃತಿ 103 ಎಸೆತಗಳಲ್ಲಿ 12 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ ಶತಕ ಬಾರಿಸಿದ್ದಾರೆ.

ಈ ಶತಕದೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಭಾರತದ ಪರ ಅತಿ ಹೆಚ್ಚು ಶತಕ ಸಿಡಿಸಿದ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.   ಸ್ಮೃತಿಗೂ ಮೊದಲು ತಂಡದ ಮಾಜಿ ನಾಯಕ ಮಿಥಾಲಿ ರಾಜ್ ಏಕದಿನದಲ್ಲಿ ಭಾರತದ 7 ಶತಕ ಸಿಡಿಸಿ ಮೊದಲ ಸ್ಥಾನದಲ್ಲಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಸಾವು ಬರಬಹುದು ಆದರೆ ಪಾಕಿಸ್ತಾನಕ್ಕೆ ಬರದೇ ಇರಬೇಡಿ.. ಟೀಂ ಇಂಡಿಯಾಕ್ಕೆ ಆಹ್ವಾನವಿತ್ತ ಜಾವೇದ್ ಮಿಯಾಂದಾದ್