Select Your Language

Notifications

webdunia
webdunia
webdunia
webdunia

ಪ್ಯಾಟ್‌ ಕಮಿನ್ಸ್ ಹ್ಯಾಟ್ರಿಕ್ ಸಾಧನೆ: ಮಳೆಯ ನಡುವೆಯೂ ಬಾಂಗ್ಲಾ ವಿರುದ್ಧ ಗೆದ್ದ ಆಸ್ಟ್ರೇಲಿಯಾ

icc 20 20 world cup

Sampriya

ಆ್ಯಂಟಿಗುವಾ , ಶುಕ್ರವಾರ, 21 ಜೂನ್ 2024 (14:34 IST)
Photo Courtesy X
ಆ್ಯಂಟಿಗುವಾ: ಪ್ಯಾಟ್ ಕಮಿನ್ಸ್ ಹ್ಯಾಟ್ರಿಕ್ ವಿಕೆಟ್ ಸಾಧನೆ ಮತ್ತು ಡೇವಿಡ್‌ ವಾರ್ನರ್‌ ಬ್ಯಾಟಿಂಗ್‌ ಬಲದಿಂದ ಆಸ್ಟ್ರೇಲಿಯಾ ತಂಡವು ಶುಕ್ರವಾರ ಬಾಂಗ್ಲಾದೇಶ ವಿರುದ್ಧ ನಡೆದ ಪಂದ್ಯದಲ್ಲಿ ಡಕ್‌ವರ್ತ್‌ ಲೂಯಿಸ್ ನಿಯಮದಡಿ 28 ರನ್ ಅಂತರದ ಗೆಲುವು ಸಾಧಿಸಿದೆ.

ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಸೂಪರ್ ಎಂಟರ ಹಂತದ ಒಂದನೇ ಗುಂಪಿನ ಪಂದ್ಯಕ್ಕೆ ಮಳೆ ಅಡಚಣೆ ಉಂಟು ಮಾಡಿತು. ಅದರ ಹೊರತಾಗಿಯೂ ಆಸ್ಟ್ರೇಲಿಯಾ ತಂಡ ಗೆಲುವು ಪಡೆದಿದೆ.

ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶ ನಾಯಕ ನಜ್ಮುಲ್ ಹೊಸೈನ್ ಶಾಂಟೊ 41 ಹಾಗೂ ತೌಹಿದ್ ಹೃದೋಯ್ 40 ರನ್‌ಗಳ ಬಲದಿಂದ 20 ಓವರ್‌ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 140 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಪ್ಯಾಟ್ ಕಮಿನ್ಸ್, ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದರು. 29 ರನ್ ನೀಡಿದ ಕಮಿನ್ಸ್ ಮೂರು ವಿಕೆಟ್ ಗಳಿಸಿದರು. ಸ್ಪಿನ್ನರ್ ಆ್ಯಡಂ ಜಂಪಾ ಎರಡು ವಿಕೆಟ್ ಗಳಿಸಿದರು.

ಆಸ್ಟ್ರೇಲಿಯಾ ವಿಕೆಟ್ ನಷ್ಟವಿಲ್ಲದೆ 60 ರನ್ ಗಳಿಸಿದ್ದ ಸಂದರ್ಭದಲ್ಲಿ ಮಳೆ ಅಡಚಣೆ ಉಂಟು ಮಾಡಿತ್ತು. ನಂತರ ಎರಡನೇ ಬಾರಿ ಮಳೆಯಿಂದಾಗಿ ಪಂದ್ಯ ನಿಲುಗಡೆಗೊಂಡಾಗ ಆಸೀಸ್ 11.2 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 100 ರನ್ ಗಳಿಸಿತು. ಬಳಿಕ ಪಂದ್ಯ ಮುಂದುವರಿಸಲು ಸಾಧ್ಯವಾಗಲಿಲ್ಲ. ಹೀಗಾಗಿ, ಡಕ್‌ವರ್ತ್‌ ಲೂಯಿಸ್‌ ನಿಯಮದಂತೆ ಆಸ್ಟ್ರೇಲಿಯ ಗೆಲುವು ಪಡೆಯಿತು.

ವಾರ್ನರ್ 35 ಎಸೆತಗಳಲ್ಲಿ ಅಜೇಯ 53 ರನ್ ಗಳಿಸಿ ಗೆಲುವಿಗೆ ಮಹತ್ವದ ಕಾಣಿಕೆ ನೀಡಿದರು. ಟ್ರಾವಿಸ್ ಹೆಡ್ 31 ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಅಜೇಯ 14 ರನ್ ಗಳಿಸಿದರು. ಬಾಂಗ್ಲಾ ಪರ ರಿಶಾದ್ ಹೊಸೈನ್ ಎರಡು ವಿಕೆಟ್ ಗಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ಬಾಲ್ ಗೆ ಸ್ವೀಪ್ ಮಾಡೋದೆಲ್ಲಾ ಇಟ್ಕೋಬೇಡ, ಸೂರ್ಯಕುಮಾರ್ ಕೆಣಕಿದ ರಶೀದ್ ಖಾನ್