Publish Date: Fri, 21 Jun 2024 (10:55 IST)
Updated Date: Fri, 21 Jun 2024 (11:02 IST)
Photo Credit: BCCI
ಬಾರ್ಬಡೋಸ್: ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಟಿ20 ವಿಶ್ವಕಪ್ ಸೂಪರ್ 8 ಪಂದ್ಯದ ವೇಳೆ ಸೂರ್ಯಕುಮಾರ್ ಯಾದವ್ ಮತ್ತು ರಶೀದ್ ಖಾನ್ ನಡುವೆ ಮಾತಿನ ಚಕಮಕಿ ನಡೆದಿದೆ.
ಈ ಪಂದ್ಯವನ್ನು ಟೀಂ ಇಂಡಿಯಾ 47 ರನ್ ಗಳಿಂದ ಗೆದ್ದುಕೊಂಡಿತ್ತು. ಸೂರ್ಯಕುಮಾರ್ ಯಾದವ್ 28 ಎಸೆತಗಳಿಂದ 3 ಸಿಕ್ಸರ್ ಸಹಿತ 53 ರನ್ ಸಿಡಿಸಿದ್ದರು. ಅವರ ಈ ಇನಿಂಗ್ಸ್ ನಿಂದಾಗಿ ಭಾರತ ಉತ್ತಮ ಮೊತ್ತ ಕಲೆ ಹಾಕಲು ಸಾಧ್ಯವಾಯಿತು. ಆದರೆ ಈ ಇನಿಂಗ್ಸ್ ವೇಳೆ ರಶೀದ್ ಖಾನ್ ಜೊತೆ ಮಾತಿನ ಚಕಮಕಿಯೂ ನಡೆಯಿತು.
ರಶೀದ್ ಖಾನ್ ಅಫ್ಘಾನಿಸ್ತಾನದ ಪ್ರಮುಖ ಬೌಲರ್. ಆದರೆ ಈ ಪಂದ್ಯದಲ್ಲಿ ಸೂರ್ಯ ಎದುರು ಅವರ ಆಟ ನಡೆಯಲಿಲ್ಲ. ಸ್ಪಿನ್ನರ್ ರಶೀದ್ ಬೌಲಿಂಗ್ ಎದುರು ಪದೇ ಪದೇ ಸೂರ್ಯ ಸ್ವೀಪ್ ಮಾಡಿ ರನ್ ಗಳಿಸುತ್ತಿದ್ದರು. ಅದೂ ಬೌಂಡರಿ ಗೆರೆ ದಾಟಿಸುತ್ತಿದ್ದರು. ಇದರಿಂದ ರಶೀದ್ ತಾಳ್ಮೆಯ ಕಟ್ಟೆಯೊಡೆಯಿತು.
ಸೂರ್ಯ ಬಳಿ ಬಂದ ರಶೀದ್ ನನ್ನ ಬೌಲಿಂಗ್ ಗೆ ಯಾಕೆ ಪದೇ ಪದೇ ಸ್ವೀಪ್ ಮಾಡುತ್ತೀಯಾ ಇದೆಲ್ಲಾ ಬೇಡ ಎಂದು ಎಚ್ಚರಿಕೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸೂರ್ಯ ಇದು ನನ್ನ ಸಮಸ್ಯೆಯಲ್ಲ ಎನ್ನುವಂತೆ ತಿರುಗೇಟು ನೀಡಿದಂತೆ ಕಂಡುಬಂತು. ಇವರಿಬ್ಬರ ಮಾತಿನ ಚಕಮಕಿಯ ವಿಡಿಯೋ ಕಡೆ ವೈರಲ್ ಆಗಿದೆ.