Publish Date: Sat, 21 Oct 2017 (07:27 IST)
Updated Date: Sat, 21 Oct 2017 (07:29 IST)
ಮುಂಬೈ: ಸಚಿನ್ ತೆಂಡುಲ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ಒಂದು ಕಾಲದಲ್ಲಿ ಟೀಂ ಇಂಡಿಯಾದ ಹಾಟ್ ಫೇವರಿಟ್ ಆರಂಭಿಕ ಜೋಡಿ. ಇವರಿಬ್ಬರು ಸೇರಿಕೊಂಡು ವಿಶ್ವದ ಬೌಲರ್ ಗಳನ್ನೇ ನಿದ್ದೆಗೆಡಿಸುತ್ತಿದ್ದರು.
ಇಂತಿಪ್ಪ ಸೆಹ್ವಾಗ್ ಜನ್ಮ ದಿನದಂದು ಸಚಿನ್ ಅವರನ್ನು ಪ್ರೀತಿಯಿಂದ ಆಕ್ಷೇಪಿಸಿದ್ದಾರೆ. ಈ ಸಂದರ್ಭದಲ್ಲಿ ಸೆಹ್ವಾಗ್ ಗೆ ಶುಭಾಷಯ ಕೋರಿದ ಸಚಿನ್ ನೀನು ಯಾವತ್ತೂ ನಾನು ಏನು ಹೇಳುತ್ತೇನೋ ಅದಕ್ಕೆ ತದ್ವಿರುದ್ದವೇ ಮಾಡುತ್ತಿದ್ದೆ ಎಂದು ತಮಾಷೆ ಮಾಡಿದ್ದಾರೆ.
‘ಹ್ಯಾಪಿ ಬರ್ತ್ ಡೇ ವೀರೂ. ನಿನಗೆ ಈ ವರ್ಷ ಅತ್ಯುತ್ತಮವಾಗಿರಲಿ. ಮೈದಾನದಲ್ಲಿ ಯಾವತ್ತೂ ನಾನು ಹೇಳಿದ್ದರ ಉಲ್ಟಾವೇ ನೀನು ನಡೆದುಕೊಳ್ಳುತ್ತಿದ್ದೆ’ ಎಂದು ಸಚಿನ್ ಟ್ವೀಟ್ ಮಾಡಿದ್ದಾರೆ. ಅಷ್ಟು ಮಾತ್ರವಲ್ಲ ಹ್ಯಾಪಿ ಬರ್ತ್ ಡೇ ಎನ್ನುವ ಆಂಗ್ಲ ಪದವನ್ನು ತಲೆಕೆಳಗಾಗಿ ಬರೆದು ಸ್ವೀಟ್ ಆಗಿ ಸೇಡು ತೀರಿಸಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ