Select Your Language

Notifications

webdunia
webdunia
webdunia
webdunia

ಟಿ20 ಕ್ರಿಕೆಟ್ ಆಡಲಿದ್ದಾರೆ ಸಚಿನ್ ತೆಂಡುಲ್ಕರ್

ಟಿ20 ಕ್ರಿಕೆಟ್ ಆಡಲಿದ್ದಾರೆ ಸಚಿನ್ ತೆಂಡುಲ್ಕರ್
ಮುಂಬೈ , ಬುಧವಾರ, 16 ಅಕ್ಟೋಬರ್ 2019 (09:06 IST)
ಮುಂಬೈ: ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಆಡುವುದನ್ನು ನೋಡದೇ ತುಂಬಾ ದಿನವಾಯಿತು ಎಂದು ಬೇಸರಿಸುತ್ತಿದ್ದ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಸದ್ಯದಲ್ಲೇ ಸಚಿನ್ ಟಿ20 ಟೂರ್ನಮೆಂಟ್ ನಲ್ಲಿ ಬ್ಯಾಟ್ ಬೀಸುವುದನ್ನು ನೋಡಬಹುದಾಗಿದೆ.


ಭಾರತದಲ್ಲಿ ಮುಂದಿನ ವರ್ಷ ನಡೆಯಲಿರುವ ರಸ್ತೆ ಸುರಕ್ಷತಾ ವಿಶ್ವ ಟಿ20 ಸರಣಿ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಸಚಿನ್ ಸೇರಿದಂತೆ ವಿವಿಧ ಐದು ದೇಶಗಳ ದಿಗ್ಗಜ ಕ್ರಿಕೆಟಿಗರು ಆಡಲಿದ್ದಾರೆ ಎಂಬ ಸುದ್ದಿ ಬಂದಿದೆ.

ಸಚಿನ್ ಜತೆಗೆ ವೆಸ್ಟ್ ಇಂಡೀಸ್ ದಂತಕತೆ ಬ್ರಿಯಾನ್ ಲಾರಾ, ಭಾರತದ ಹೊಡೆಬಡಿಯ ಆಟಗಾರ ವೀರೇಂದ್ರ ಸೆಹ್ವಾಗ್, ಆಸ್ಟ್ರೇಲಿಯಾ ವೇಗಿ ಬ್ರೆಟ್ ಲೀ, ಶ್ರೀಲಂಕಾದ ತಿಲಕರತ್ನೆ ದಿಲ್ಶಾನ್ ಸೇರಿದಂತೆ ಹಲವು ಮಾಜಿ ದಿಗ್ಗಜ ಕ್ರಿಕೆಟಿಗರು ಈ ಟೂರ್ನಮೆಂಟ್ ನಲ್ಲಿ ಆಡಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿಯೋಜಿತ ಬಿಸಿಸಿಐ ಅಧ್ಯಕ್ಷ ಗಂಗೂಲಿಗೆ ಮುಂದಿರುವ ಸವಾಲು ಇದು