Publish Date: Thu, 04 Jan 2018 (08:22 IST)
Updated Date: Thu, 04 Jan 2018 (08:24 IST)
ಮುಂಬೈ: ದ.ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗಾಗಿ ಪ್ರವಾಸ ಕೈಗೊಂಡಿರುವ ಟೀಂ ಇಂಡಿಯಾದಲ್ಲಿ ಯಾರು ಈ ಸರಣಿಯಲ್ಲಿ ಹೆಚ್ಚು ಉಪಯುಕ್ತ ಕೊಡುಗೆ ಸಲ್ಲಿಸಬಲ್ಲರು? ಹೀಗಂತ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಗೆ ಪ್ರಶ್ನೆ ಕೇಳಿದ್ದಕ್ಕೆ ಅವರು ಕೆಎಲ್ ರಾಹುಲ್ ಹೆಸರು ಹೇಳಿದ್ದಾರೆ.
ಇಡೀ ಸರಣಿಯಲ್ಲಿ ದ.ಆಫ್ರಿಕಾ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸಬಲ್ಲ ಒಬ್ಬ ಬ್ಯಾಟ್ಸ್ ಮನ್ ಹೆಸರು ಹೇಳಿ ಎಂದಿದ್ದಕ್ಕೆ ವಿರಾಟ್ ಕೊಹ್ಲಿಯಂತಹ ಘಟಾನುಘಟಿಯ ಹೆಸರು ಬಿಟ್ಟು ಸಚಿನ್ ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಹೇಳಿದ್ದಾರೆ.
‘ನಾನು ರಾಹುಲ್ ಆಟವನ್ನು ಹೆಚ್ಚು ವೀಕ್ಷಿಸಿಲ್ಲ. ಆದರೆ ಸದ್ಯಕ್ಕೆ ತಂಡದಲ್ಲಿರುವ ಆಟಗಾರರ ಪೈಕಿ ಕೆಎಲ್ ರಾಹುಲ್ ಗೆ ಆಫ್ರಿಕಾ ದಾಳಿಯನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯವಿದೆ’ ಎಂದು ಸಚಿನ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಕ್ರಿಕೆಟ್ ದೇವರೇ ಹೊಗಳಿದರೂ ರಾಹುಲ್ ತಂಡದಲ್ಲಿ ತಮ್ಮ ಸ್ಥಾನಕ್ಕಾಗಿ ಪೈಪೋಟಿ ನಡೆಸಬೇಕಿದೆ ಎಂಬುದು ವಿಪರ್ಯಾಸ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ