Publish Date: Mon, 01 Jan 2018 (08:12 IST)
Updated Date: Mon, 01 Jan 2018 (08:17 IST)
ಕೇಪ್ ಟೌನ್: ದ. ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಆಡಲು ಟೀಂ ಇಂಡಿಯಾ ದ. ಆಫ್ರಿಕಾಗೆ ಬಂದಿಳಿದಿದೆ. ಆದರೆ ಬಂದ ಬೆನ್ನಲ್ಲೇ ಶಿಖರ್ ಧವನ್ ಗಾಯದಿಂದಾಗಿ ಮೊದಲ ಟೆಸ್ಟ್ ಗೆ ಅಲಭ್ಯರಾಗಿರುವುದು ನಾಯಕ ಕೊಹ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಅಭ್ಯಾಸ ಪಂದ್ಯಕ್ಕೂ ಮೊದಲೇ ಶಿಖರ್ ಧವನ್ ಪಾದದ ಗಾಯಕ್ಕೆ ತುತ್ತಾಗಿರುವುದರಿಂದ ಮೊದಲ ಟೆಸ್ಟ್ ನಿಂದ ಔಟ್ ಆಗಿದ್ದಾರೆ. ಪಂದ್ಯವಾಡುವ ಮೊದಲೇ ಗಾಯಕ್ಕೆ ತುತ್ತಾಗಿರುವುದು ಕೊಹ್ಲಿ ಚಿಂತೆಗೆ ಕಾರಣವಾಗಿದೆ.
ಶಿಖರ್ ಕೊಂಚ ಎಚ್ಚರಿಕೆ ವಹಿಸಬೇಕಿತ್ತು ಎಂದು ಕೊಹ್ಲಿ ತಮ್ಮ ಮಾತುಗಳಲ್ಲೇ ಅಸಮಾಧಾನ ಹೊರ ಹಾಕಿದ್ದಾರೆ. ಆದರೆ ಧವನ್ ಅನುಪಸ್ಥಿತಿಯಲ್ಲಿ ತಂಡಕ್ಕೆ ಆರಂಭಿಕರ ಕೊರತೆಯೇನೂ ಆಗದು. ಮುರಳಿ ವಿಜಯ್ ಮತ್ತು ಕೆಎಲ್ ರಾಹುಲ್ ಕಣಕ್ಕಿಳಿಯುವುದು ಖಚಿತ. ಹಾಗಿದ್ದರೂ ಧವನ್ ರಂತಹ ನಿರ್ಭೀಡೆಯ ಆಟಗಾರ ಹೊರಗುಳಿದಿರುವುದು ಕೊಹ್ಲಿ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ