Publish Date: Thu, 04 Jan 2018 (08:10 IST)
Updated Date: Thu, 04 Jan 2018 (08:12 IST)
ನವದೆಹಲಿ: ವಿದರ್ಭ ತಂಡದ ಎದುರು ರಣಜಿ ಟ್ರೋಫಿ ಕ್ರಿಕೆಟ್ ಫೈನಲ್ ಸೋತು, ನವದೆಹಲಿಗೆ ಮರಳುವ ಮಾರ್ಗ ಮಧ್ಯದಲ್ಲಿ ದೆಹಲಿ ಕ್ರಿಕೆಟಿಗರಿಗೆ ಪ್ರಾಣಾಪಾಯ ಎದುರಾಗಿದೆ!
ಇಂದೋರ್ ನಿಂದ ದೆಹಲಿಗೆ ಪ್ರಯಾಣಿಸಲು ಇಂಡಿಗೋ ವಿಮಾನ ಏರಿದ್ದ ಕ್ರಿಕೆಟಿಗರು ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ. ಇವರು ಪ್ರಯಾಣಿಸುತ್ತಿದ್ದ ವಿಮಾನ ಟೇಕ್ ಆಫ್ ಆದ ಬಳಿಕ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ತಕ್ಷಣವೇ ಪೈಲಟ್ ವಿಮಾನ ಮರಳಿ ರನ್ ವೇನತ್ತ ಚಲಾಯಿಸಿದ್ದಾರೆ.
ಹೀಗಾಗಿ ಕೂದಲೆಳೆಯಲ್ಲಿ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಈ ಬಗ್ಗೆ ದೆಹಲಿ ಕ್ರಿಕೆಟಿಗ ಉನ್ಮುಕ್ತ್ ಚಾಂದ್ ತಮ್ಮ ಟ್ವಿಟರ್ ಪೇಜ್ ನಲ್ಲಿ ಹೇಳಿಕೊಂಡಿದ್ದಾರೆ. ಘಟನೆಯ ಬಳಿಕ ದೆಹಲಿ ಕ್ರಿಕೆಟಿಗರು ಮರಳಿ ತಮ್ಮ ಹೋಟೆಲ್ ಕೊಠಡಿಗೆ ಮರಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ