Select Your Language

Notifications

webdunia
webdunia
webdunia
webdunia

ಕ್ಯಾಚ್ ಪಡೆಯಲು ಜಾಣತನ ಪ್ರದರ್ಶಿಸಿದ ರೋಹಿತ್ ಶರ್ಮಾ

ಕ್ಯಾಚ್ ಪಡೆಯಲು ಜಾಣತನ ಪ್ರದರ್ಶಿಸಿದ ರೋಹಿತ್ ಶರ್ಮಾ
ಆಕ್ಲೆಂಡ್ , ಶನಿವಾರ, 25 ಜನವರಿ 2020 (08:56 IST)
ಆಕ್ಲೆಂಡ್: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆದ ಮೊದಲ ಟಿ20 ಪಂದ್ಯದಲ್ಲಿ ರೋಹಿತ್ ಶರ್ಮಾ ಪಡೆದ ಅದ್ಭುತ ಕ್ಯಾಚ್ ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.


ಮೊದಲು ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್ ಬೇಗನೇ ವಿಕೆಟ್ ಕಳೆದುಕೊಂಡಿರಲಿಲ್ಲ. ಹೀಗಾಗಿ ಭಾರತಕ್ಕೆ ಎದುರಾಳಿಗಳ ರನ್ ವೇಗ ಆತಂಕ ಸೃಷ್ಟಿಸಿತ್ತು. ಆದರೆ ಈ ವೇಳೆ ರೋಹಿತ್ ಶರ್ಮಾ ಬೌಂಡರಿ ಗೆರೆ ಬಳಿ ಮಾರ್ಟಿನ್ ಗುಪ್ಟಿಲ್ ನೀಡಿದ ಕ್ಯಾಚ್ ಪಡೆದು ಮೊದಲ ಬ್ರೇಕ್ ನೀಡಲು ನೆರವಾದರು.

ಬೌಂಡರಿ ಗೆರೆ ಬಳಿ ಕ್ಯಾಚ್ ಪಡೆದ ರೋಹಿತ್ ಬ್ಯಾಲೆನ್ಸ್ ತಪ್ಪಿ ಗೆರೆ ಟಚ್ ಮಾಡುವ ಅಪಾಯವಿತ್ತು. ಹೀಗಾಗಿ ಬಾಲ್ ನ್ನು ಕೊಂಚವೇ ಮೇಲಕ್ಕೆ ಚಿಮ್ಮಿ ತಮ್ಮ ದೇಹವನ್ನು ಬ್ಯಾಲೆನ್ಸ್ ಮಾಡಿಕೊಂಡು ಮತ್ತೆ ಕ್ಯಾಚ್ ಪಡೆದು ರೋಹಿತ್ ವಿಕೆಟ್ ಕೀಳಲು ನೆರವಾದರು. ರೋಹಿತ್ ಈ ಸಾಹಸ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ನ್ಯೂಜಿಲೆಂಡ್ ಟಿ20: ಗೆಲುವಿನ ಶುಭಾರಂಭ ಮಾಡಿದ ಟೀಂ ಇಂಡಿಯಾ