ಆಕ್ಲೆಂಡ್: ವಿಶ್ವಕಪ್ ಕ್ರಿಕೆಟ್ ಸೆಮಿಫೈನಲ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ಆಘಾತಕಾರಿ ಸೋಲಿನ ಬಳಿಕ ಇದೇ ಮೊದಲ ಬಾರಿಗೆ ಉಭಯ ತಂಡಗಳು ಎದುರುಬದುರಾಗುತ್ತಿವೆ.
									
										
								
																	
ಅಂದಿನ ಸೋಲಿಗೆ ಈ ಸರಣಿಯಲ್ಲಿ ಸೇಡು ತೀರಿಸಿಕೊಳ್ಳುತ್ತೀರಾ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಕೇಳಿದ್ದಕ್ಕೆ ಅವರ ಪ್ರತಿಕ್ರಿಯೆ ಏನಿತ್ತು ಗೊತ್ತಾ?
									
			
			 
 			
 
 			
			                     
							
							
			        							
								
																	ಈ ಆಟಗಾರರ ವಿರುದ್ಧ ಸೇಡಿನ ಬಗ್ಗೆ ಯೋಚನೆ ಮಾಡಲೂ ನಮಗೆ ಸಾಧ‍್ಯವಾಗುತ್ತಿಲ್ಲ. ಯಾಕೆಂದರೆ ಕಿವೀಸ್ ಆಟಗಾರರು ಅಷ್ಟು ಒಳ್ಳೆಯವರು. ಅವರು ಅಂದು ಫೈನಲ್ ತಲುಪಿದ್ದಕ್ಕೆ ನಮಗೆ ಸಂತೋಷವಿದೆ. ಸೇಡಿನ ಮಾತಿಲ್ಲ. ಆದರೆ ಮೈದಾನದಲ್ಲಿ ಪೈಪೋಟಿ ನೀಡಲಿದ್ದೇವೆ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.