Select Your Language

Notifications

webdunia
webdunia
webdunia
webdunia

ಮತ್ತೆ ಸಂಜು ಸ್ಯಾಮ್ಸನ್ ಗೆ ಅವಕಾಶ: ನ್ಯೂಜಿಲೆಂಡ್ ಸರಣಿಗೆ ಸಂಜು, ಪೃಥ್ವಿ ಶಾ ಆಯ್ಕೆ

ಮತ್ತೆ ಸಂಜು ಸ್ಯಾಮ್ಸನ್ ಗೆ ಅವಕಾಶ: ನ್ಯೂಜಿಲೆಂಡ್ ಸರಣಿಗೆ ಸಂಜು, ಪೃಥ್ವಿ ಶಾ ಆಯ್ಕೆ
ಮುಂಬೈ , ಬುಧವಾರ, 22 ಜನವರಿ 2020 (09:19 IST)
ಮುಂಬೈ: ನ್ಯೂಜಿಲೆಂಡ್ ವಿರುದ್ಧದ ಕ್ರಿಕೆಟ್ ಸರಣಿಯಿಂದ ಶಿಖರ್ ಧವನ್ ಹೊರಬಿದ್ದ ಹಿನ್ನಲೆಯಲ್ಲಿ ಅವರ ಸ್ಥಾನಕ್ಕೆ ಸಂಜು ಸ್ಯಾಮ್ಸನ್ ಮತ್ತು ಪೃಥ್ವಿ ಶಾಗೆ ಅವಕಾಶ ನೀಡಲಾಗಿದೆ.


ಸಂಜು ಸ್ಯಾಮ್ಸನ್ ಪ್ರತಿಭೆಯಿದ್ದೂ ಅವಕಾಶ ಸಿಗದ ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಕಟು ಟೀಕೆ ವ್ಯಕ್ತವಾಗಿತ್ತು. ಸಂಜು ಕೂಡಾ ತಮ್ಮ ಟ್ವಿಟರ್ ಪೇಜ್ ನಲ್ಲಿ ಕೇವಲ ಕೊಮಾ ಚಿಹ್ನೆ ಪ್ರಕಟಿಸಿ ತಮ್ಮ ಅಸಮಾಧಾನ ಹೊರಹಾಕಿದ್ದರು. ಇದೀಗ ಶಿಖರ್ ಧವನ್ ಗಾಯಗೊಂಡಿರುವ ಹಿನ್ನಲೆಯಲ್ಲಿ ಟಿ20 ಸರಣಿಗೆ ಸಂಜು ಸ್ಯಾಮ್ಸನ್ ಮತ್ತು ಏಕದಿನ ಸರಣಿಗೆ ಪೃಥ್ವಿ ಶಾ ಆಯ್ಕೆಯಾಗಿದ್ದಾರೆ.

ಆದರೆ ಇಬ್ಬರಿಗೂ ಆಡುವ ಬಳಗದಲ್ಲಿ ಅವಕಾಶ ಸಿಗುವುದು ಅನುಮಾನ. ಯಾಕೆಂದರೆ ವಿಕೆಟ್ ಕೀಪರ್ ಆಗಿ ಕೆಎಲ್ ರಾಹುಲ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇನ್ನು, ಆರಂಭಿಕರಾಗಿಯೂ ರಾಹುಲ್ ಉತ್ತಮ ಪ್ರದರ್ಶನ ನೀಡುತ್ತಿರುವುದರಿಂದ ಪೃಥ್ವಿ ಶಾಗೂ ಏಕದಿನ ಸರಣಿಯಲ್ಲಿ ಸ್ಥಾನ ಸಿಗುವುದು ಅನುಮಾನವೇ.

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡಿಗ ಮನೀಶ್ ಪಾಂಡೆಗೆ ಪಾಕ್ ವೇಗಿ ಶೊಯೇಬ್ ಅಖ್ತರ್ ಕೊಟ್ಟ ಕಾಂಪ್ಲಿಮೆಂಟ್ ಏನು ಗೊತ್ತಾ?