ಆಕ್ಲೆಂಡ್: ಟೀಂ ಇಂಡಿಯಾದ ಮಹತ್ವದ ನ್ಯೂಜಿಲೆಂಡ್ ಪ್ರವಾಸ ಇಂದಿನಿಂದ ಅಧಿಕೃತವಾಗಿ ಆರಂಭವಾಗಲಿದೆ. ಇಂದು ಉಭಯ ತಂಡಗಳ ನಡುವೆ ಮೊದಲ ಟಿ20 ಹಣಾಹಣಿ ನಡೆಯಲಿದೆ.
ನ್ಯೂಜಿಲೆಂಡ್ ಪ್ರವಾಸ ಭಾರತಕ್ಕೆ ಯಾವತ್ತೂ ಕಠಿಣವಾಗಿತ್ತು. ಇಲ್ಲಿನ ಪಿಚ್ ಗಳಲ್ಲಿ ರನ್ ಗಳಿಸುವುದು ಅಷ್ಟು ಸುಲಭವಲ್ಲ. ಹೀಗಾಗಿ ಭಾರತ ತನ್ನೆಲ್ಲಾ ವಿಭಾಗಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರಬೇಕಿದೆ.
ಹಾಗಿದ್ದರೂ ಆಕ್ಲೆಂಡ್ ಕೊಂಚ ಬ್ಯಾಟಿಂಗ್ ಗೂ ಸಹಕಾರಿಯಾಗುವ ಪಿಚ್. ಇಲ್ಲಿ ಟಿ20 ಪಂದ್ಯಗಳಲ್ಲಿ 245 ರನ್ ಗರಿಷ್ಠ ಸ್ಕೋರ್. ಹೀಗಾಗಿ ಭಾರತದ ಪ್ರಮುಖ ಬ್ಯಾಟ್ಸ್ ಮನ್ ಗಳು ರನ್ ಹೊಳೆ ಹರಿಸಬೇಕಿದೆ. ಪಂದ್ಯ ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ 12.30 ಕ್ಕೆ ಆರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದಾಗಿದೆ.