Publish Date: Fri, 24 Jan 2020 (09:49 IST)
Updated Date: Fri, 24 Jan 2020 (09:51 IST)
ಮುಂಬೈ: ಟೀಂ ಇಂಡಿಯಾ ಇತ್ತೀಚೆಗಿನ ದಿನಗಳಲ್ಲಿ ಬಿಡುವಿಲ್ಲದೇ ಕ್ರಿಕೆಟ್ ಆಡುತ್ತಿರುವ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಮಾಧ್ಯಮಗಳ ಮುಂದೆ ಕಿಡಿ ಕಾರಿದ್ದು ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆಯಿದೆ.
ನ್ಯೂಜಿಲೆಂಡ್ ಸರಣಿಗೆ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೊಹ್ಲಿ ಈ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ಬಾಂಗ್ಲಾ ಸರಣಿ ಮುಗಿದ ಬಳಿಕ ವೆಸ್ಟ್ ಇಂಡೀಸ್, ಶ್ರೀಲಂಕಾ, ಆಸ್ಟ್ರೇಲಿಯಾ ಇದೀಗ ನ್ಯೂಜಿಲೆಂಡ್. ಇದು ಅತಿಯಾಯಿತು ಪರಿಶೀಲಿಸಿ ಎಂದು ಕೊಹ್ಲಿ ಅಸಮಾಧಾನ ಹೊರಹಾಕಿದ್ದರು.
ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಂತಿಮ ಏಕದಿನ ಪಂದ್ಯ ಮುಗಿದ ಬೆನ್ನಲ್ಲೇ ಆಟಗಾರರಿಗೆ ಅರೆಗಳಿಗೆಯೂ ಬಿಡುವು ತೆಗೆದುಕೊಳ್ಳದೇ ನ್ಯೂಜಿಲೆಂಡ್ ವಿಮಾನವೇರಿದ್ದರು. ಆದರೆ ಈ ಅಸಮಾಧಾನವನ್ನು ಕೊಹ್ಲಿ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದು ಬಿಸಿಸಿಐ ಅಸಮಾಧಾನಕ್ಕೆ ಗುರಿಯಾಗುವ ಸಾಧ್ಯತೆಯಿದೆ.