Publish Date: Wed, 11 Dec 2019 (09:19 IST)
Updated Date: Wed, 11 Dec 2019 (09:21 IST)
ಮುಂಬೈ: ಎಲ್ಲಾ ಅಂದುಕೊಂಡಂತೇ ನಡೆದಿದ್ದರೆ ರೋಹಿತ್ ಶರ್ಮಾ ಕಳೆದ ಪಂದ್ಯದಲ್ಲಿಯೇ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ಸಿಕ್ಸರ್ ಬಾರಿಸಿದ ಭಾರತೀಯ ಎಂಬ ದಾಖಲೆ ಮಾಡಬೇಕಿತ್ತು. ಆದರೆ ಅದು ಕೈಗೂಡಿರಲಿಲ್ಲ.
ಕಳೆದ ಎರಡೂ ಟಿ20 ಪಂದ್ಯಗಳಲ್ಲಿ ರೋಹಿತ್ ಬೇಗನೇ ಔಟಾಗಿ ನಿರಾಸೆ ಮೂಡಿಸಿದ್ದರು. ಆ ಒಂದು ಸಿಕ್ಸರ್ ಗಾಗಿ ಅಭಿಮಾನಿಗಳು ಇಂದು ನಡೆಯಲಿರುವ ವಿಂಡೀಸ್ ವಿರುದ್ದದ ಅಂತಿಮ ಪಂದ್ಯದಲ್ಲೂ ರೋಹಿತ್ ಅಭಿಮಾನಿಗಳು ಕಾಯುತ್ತಿದ್ದಾರೆ.
ಇಂದು ರೋಹಿತ್ ಏಕೈಕ ಸಿಕ್ಸರ್ ಸಿಡಿಸಿದರೂ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 400 ಸಿಕ್ಸರ್ ಸಿಡಿಸಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ದಾಖಲೆಗೆ ಪಾತ್ರರಾಗಲಿದ್ದಾರೆ. ಇದರ ಜತೆಗೆ ಕೊಹ್ಲಿ, ರೋಹಿತ್ ನಡುವೆ ಟಿ20 ಕ್ರಿಕೆಟ್ ನಲ್ಲಿ ಗರಿಷ್ಠ ರನ್ ಗಳಿಸಿದ ಸಾಧನೆಯ ಹಾವು ಏಣಿ ಆಟ ಮತ್ತೆ ಮುಂದುವರಿಯಲಿದೆ. ಸದ್ಯಕ್ಕೆ ಕೊಹ್ಲಿ 2563 ರನ್ ಪೇರಿಸಿ ಅಗ್ರ ಸ್ಥಾನದಲ್ಲಿದ್ದರೆ, ರೋಹಿತ್ 2562 ರನ್ ಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದಾರೆ.