Select Your Language

Notifications

webdunia
webdunia
webdunia
webdunia

ಕಳಪೆ ಫೀಲ್ಡಿಂಗ್ ಮಾಡಿದ ಟೀಂ ಇಂಡಿಯಾಗೆ ಅಭಿಮಾನಿಗಳಿಂದ ಛೀಮಾರಿ

ಕಳಪೆ ಫೀಲ್ಡಿಂಗ್ ಮಾಡಿದ ಟೀಂ ಇಂಡಿಯಾಗೆ ಅಭಿಮಾನಿಗಳಿಂದ ಛೀಮಾರಿ
ತಿರುವನಂತಪುರಂ , ಸೋಮವಾರ, 9 ಡಿಸೆಂಬರ್ 2019 (10:06 IST)
ತಿರುವನಂತಪುರಂ: ವೆಸ್ಟ್ ಇಂಡೀಸ್ ವಿರುದ್ಧ ದ್ವಿತೀಯ ಟಿ20 ಪಂದ್ಯದಲ್ಲಿ 8 ವಿಕೆಟ್ ಗಳ ಹೀನಾಯ ಸೋಲು ಕಾಣಲು ಟೀಂ ಇಂಡಿಯಾದ ಕಳಪೆ ಫೀಲ್ಡಿಂಗ್ ಕಾರಣ ಎಂಬುದನ್ನು ನಾಯಕ ಕೊಹ್ಲಿ ಕೂಡಾ ಒಪ್ಪಿಕೊಂಡಿದ್ದಾರೆ.


ಒಂದೇ ಓವರ್ ನಲ್ಲಿ ಎರಡೆರಡು ಕ್ಯಾಚ್ ಬಿಟ್ಟಿದ್ದ ಟೀಂ ಇಂಡಿಯಾದ ಕಳಪೆ ಫೀಲ್ಡಿಂಗ್ ಗೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಛೀಮಾರಿ ಹಾಕಿದ್ದಾರೆ.

ಮೊನ್ನೆಯಷ್ಟೇ ನಾಯಕ ಕೊಹ್ಲಿ ಕಳಪೆ ಪ್ರದರ್ಶನ ನೀಡಿದರೆ ರಿಷಬ್ ಪಂತ್ ಗೆ ಧೋನಿ ಹೆಸರು ಕೂಗಿ ಅವಮಾನ ಮಾಡಬೇಡಿ ಎಂದಿದ್ದರು. ಆದರೆ ದುರದೃಷ್ಟವಶಾತ್ ಮತ್ತೆ ರಿಷಬ್ ನಿನ್ನೆಯ ಪಂದ್ಯದಲ್ಲಿ ಕ್ಯಾಚ್ ಬಿಟ್ಟಿದ್ದರು. ಇದೇ ಕಾರಣಕ್ಕೆ ಆಕ್ರೋಶಗೊಂಡಿರುವ ಅಭಿಮಾನಿಗಳು ಹೀಗೇ ಮಾಡಿದರೆ ಮತ್ತೆ ಧೋನಿ ಹೆಸರು ಎತ್ತಿ ಕೂಗಬೇಕಾಗುತ್ತದೆ ಎಂದಿದ್ದಾರೆ. ಇನ್ನು ಕೆಲವರು ಭಾರತದ ಫೀಲ್ಡಿಂಗ್ ಕೋಚ್ ಅದೇನು ಮಾಡ್ತಾ ಇದ್ದಾರೆ ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೆ, ವಿವಿಧ ಮೆಮೆಗಳ ಮೂಲಕ ಟೀಂ ಇಂಡಿಯಾ ಆಟಗಾರರನ್ನು ಲೇವಡಿ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತಿರುವನಂತಪುರಂ ಅಭಿಮಾನಿಗಳ ಕರೆಗೆ ಕಿವಿಗೊಡದ ವಿರಾಟ್ ಕೊಹ್ಲಿ