Select Your Language

Notifications

webdunia
webdunia
webdunia
webdunia

ಆಸ್ಟ್ರೇಲಿಯಾ ಜತೆ ಪಿಂಕ್ ಬಾಲ್ ಟೆಸ್ಟ್ ಬಗ್ಗೆ ಗಂಗೂಲಿ ಹೇಳಿದ್ದೇನು ಗೊತ್ತಾ?

ಆಸ್ಟ್ರೇಲಿಯಾ ಜತೆ ಪಿಂಕ್ ಬಾಲ್ ಟೆಸ್ಟ್ ಬಗ್ಗೆ ಗಂಗೂಲಿ ಹೇಳಿದ್ದೇನು ಗೊತ್ತಾ?
ಮುಂಬೈ , ಸೋಮವಾರ, 9 ಡಿಸೆಂಬರ್ 2019 (09:22 IST)
ಮುಂಬೈ: ಬಾಂಗ್ಲಾದೇಶ ವಿರುದ್ದ ಚೊಚ್ಚಲ ಪಿಂಕ್ ಬಾಲ್ ಟೆಸ್ಟ್ ಆಡಿದ ಬಳಿಕ ಆಸ್ಟ್ರೇಲಿಯಾದಲ್ಲೂ ಟೀಂ ಇಂಡಿಯಾ ಹಗಲು ರಾತ್ರಿ ಟೆಸ್ಟ್ ಪಂದ್ಯವಾಡಬೇಕೆಂಬ ಒತ್ತಾಯಗಳು ಕೇಳಿಬರುತ್ತಿವೆ. ಈ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದೇನು ಗೊತ್ತಾ?


ಆಸ್ಟ್ರೇಲಿಯಾದಲ್ಲಿ ಪಿಂಕ್ ಬಾಲ್ ಆಡುವ ಬಗ್ಗೆ ಈ ಮೊದಲು ವಿರಾಟ್ ಕೊಹ್ಲಿಗೂ ಪ್ರಶ್ನೆ ಕೇಳಲಾಗಿತ್ತು .ಆಗ ಅವರು ಸೂಕ್ತ ಅಭ್ಯಾಸಕ್ಕೆ ವೇದಿಕೆ ಒದಗಿಸಿದರೆ ಪರಿಶೀಲಿಸೋಣ ಎಂದಿದ್ದರು.

ಇದೀಗ ಗಂಗೂಲಿ ‘ನಾಲ್ಕು ಟೆಸ್ಟ್ ಪಂದ್ಯಗಳ ಪೈಕಿ ಎರಡು ಪಿಂಕ್ ಬಾಲ್ ಟೆಸ್ಟ್ ಆಡಬೇಕೆಂದರೆ ಕಷ್ಟವಾಗಬಹುದು. ಹಾಗಿದ್ದರೂ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಜತೆ ಈ ಬಗ್ಗೆ ಚರ್ಚಿಸಬೇಕಿದೆ’ ಎಂದಿದ್ದಾರೆ. ಹಾಗಿದ್ದರೂ ಮುಂದಿನ ಬಾರಿ ಭಾರತ ಆಸ್ಟ್ರೇಲಿಯಾ ಪ್ರವಾಸ ಮಾಡಿದಾಗ ಒಂದಾದರೂ ಹಗಲು ರಾತ್ರಿ ಟೆಸ್ಟ್ ಪಂದ್ಯವಾಡುವ ಸಾಧ್ಯತೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಂಡೀಸ್ ವಿರುದ್ಧ ಸೋತ ಟೀಂ ಇಂಡಿಯಾ