Select Your Language

Notifications

webdunia
webdunia
webdunia
webdunia

ಕೊಹ್ಲಿಯನ್ನು ಕೆಣಕಬೇಡಿ ಎಂದು ಎಷ್ಟು ಸಲ ಹೇಳಬೇಕು ನಿಮಗೆ? ವಿಂಡೀಸರಿಗೆ ಅಮಿತಾಭ್ ಬಚ್ಚನ್ ಲೇವಡಿ

ಕೊಹ್ಲಿಯನ್ನು ಕೆಣಕಬೇಡಿ ಎಂದು ಎಷ್ಟು ಸಲ ಹೇಳಬೇಕು ನಿಮಗೆ? ವಿಂಡೀಸರಿಗೆ ಅಮಿತಾಭ್ ಬಚ್ಚನ್ ಲೇವಡಿ
ಮುಂಬೈ , ಶನಿವಾರ, 7 ಡಿಸೆಂಬರ್ 2019 (13:46 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮನ್ನು ಕೆಣಕಿದವರಿಗೆ ತಿರುಗೇಟು ಕೊಡದೇ ಬಿಡುವ ಅಸಾಮಿಯೇ ಅಲ್ಲ. ಕಳೆದ ಬಾರಿ ಭಾರತ ವಿಂಡೀಸ್ ಪ್ರವಾಸ ಮಾಡಿದ್ದಾಗ ತಮ್ಮನ್ನು ಕೆಣಕಿದ ವಿಂಡೀಸರಿಗೆ ಕೊಹ್ಲಿ ನಿನ್ನೆಯ ಪಂದ್ಯದಲ್ಲಿ ತಿರುಗೇಟು ಕೊಟ್ಟಿದ್ದಾರೆ.


ನಿನ್ನೆಯ ಪಂದ್ಯದಲ್ಲಿ 90 ರನ್ ಗಳಿಸಿದ ಮೇಲೆ ಕೊಹ್ಲಿ ಸಂತೋಷದಲ್ಲಿ ನೋಟ್ ಬುಕ್ ಬರೆಯುವಂತೆ ವಿಂಡೀಸ್ ಆಟಗಾರರನ್ನು ವ್ಯಂಗ್ಯ ಮಾಡಿ ತಿರುಗೇಟು ನೀಡಿದ್ದಾರೆ. ಇದರ ಬಗ್ಗೆ ಕೊಹ್ಲಿ ಪಂದ್ಯದ ನಂತರವೂ ನಗುತ್ತಲೇ ಪ್ರತಿಕ್ರಿಯಿಸಿದ್ದು, ಇದು ಒಂಥರಾ ಟಿಕ್ ಫಾರ್ ಟ್ಯಾಕ್ ಅಷ್ಟೇ ಎಂದಿದ್ದರು.

ಆದರೆ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಇದನ್ನೇ ಇಟ್ಟುಕೊಂಡು ವಿಂಡೀಸ್ ಆಟಗಾರರಿಗೆ ವ್ಯಂಗ್ಯವಾಗಿ ತಮಾಷೆ ಮಾಡಿದ್ದಾರೆ. ‘ಗೆಳೆಯರೇ. ಎಷ್ಟು ಬಾರಿ ಹೇಳಬೇಕು ನಿಮಗೆ? ಕೊಹ್ಲಿಯನ್ನು ಕೆಣಕಬೇಡಿ ಅಂತ. ನನ್ನ ಮಾತೇ ಕೇಳಲ್ಲ ನೀವು. ನೋಡಿ ಅವನು ನಿಮಗೆ ಹೇಗೆ ತಿರುಗೇಟು ಕೊಟ್ಟ ಅಂತ? ಆಗ ನಿಮ್ಮ ಮುಖ ಹೇಗಾಯಿತು ನೋಡಿ? ಇದೆಲ್ಲಾ ಬೇಕಿತ್ತಾ ನಿಮಗೆ. ನನ್ನ ಮಾತು ಕೇಳಿ. ವಿರಾಟ್ ನ ಕೆಣಕಲು ಹೋಗಬೇಡಿ’ ಎಂದು ಟ್ವಿಟರ್ ನಲ್ಲಿ ಅಮಿತಾಭ್ ತಮಾಷೆ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ಬ್ಯಾಟಿಂಗ್ ನ ಮೊದಲಾರ್ಧವನ್ನು ಯಾರೂ ಅನುಕರಿಸಬೇಡಿ! ಹೀಗಂತ ಕೊಹ್ಲಿ ಹೇಳಿದ್ದೇಕೆ ಗೊತ್ತಾ?