Select Your Language

Notifications

webdunia
webdunia
webdunia
webdunia

ಭಾರತ-ವಿಂಡೀಸ್ ಮೊದಲ ಟಿ20: ಟಾಸ್ ಗೆದ್ದ ಟೀಂ ಇಂಡಿಯಾ

ಭಾರತ-ವಿಂಡೀಸ್ ಮೊದಲ ಟಿ20: ಟಾಸ್ ಗೆದ್ದ ಟೀಂ ಇಂಡಿಯಾ
ಹೈದರಾಬಾದ್ , ಶುಕ್ರವಾರ, 6 ಡಿಸೆಂಬರ್ 2019 (18:35 IST)
ಹೈದರಾಬಾದ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ.


ಎರಡನೇ ಅವಧಿಯಲ್ಲಿ ಇಬ್ಬನಿಯಿಂದಾಗಿ ಬೌಲಿಂಗ್ ಮಾಡುವುದು ಕಷ್ಟ. ಹೀಗಾಗಿ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದೇವೆ ಎಂದು ನಾಯಕ ಕೊಹ್ಲಿ ಹೇಳಿದ್ದಾರೆ. ಸಂಜು ಸ್ಯಾಮ್ಸನ್, ಮನೀಶ್ ಪಾಂಡೆ, ಉಮೇಶ್ ಯಾದವ್ ಹೊರಗುಳಿದಿದ್ದಾರೆ. ಭುವನೇಶ್ವರ್ ಕುಮಾರ್ ಮತ್ತು ಮೊಹಮ್ಮದ್ ಶಮಿ ಆಡುವ ಬಳಗದಲ್ಲಿ ಸ್ಥಾನ ಪಡೆದಿದ್ದಾರೆ.

ಟಾಸ್ ಗೂ ಮುನ್ನ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಹೆಸರಿನ ಸ್ಟ್ಯಾಂಡ್ ಅನಾವರಣ ಕಾರ್ಯಕ್ರಮವೂ ನಡೆದಿದೆ. ಹೈದರಾಬಾದ್ ಮೂಲದ ಅಜರುದ್ದೀನ್ ಭಾರತ ಕ್ರಿಕೆಟ್ ತಂಡ ಕಂಡ ಅಪ್ರತಿಮ ನಾಯಕರಲ್ಲೊಬ್ಬರು.

Share this Story:

Follow Webdunia kannada

ಮುಂದಿನ ಸುದ್ದಿ

ಡೆಲ್ಲಿ ಐಪಿಎಲ್ ತಂಡವನ್ನು ಖರೀದಸಲಿರುವ ಗೌತಮ್ ಗಂಭೀರ್?!