Select Your Language

Notifications

webdunia
webdunia
webdunia
webdunia

ಭಾರತ-ವಿಂಡೀಸ್ ಸರಣಿಯಲ್ಲಿ ಹೊಸ ಪ್ರಯೋಗ

ಭಾರತ-ವಿಂಡೀಸ್ ಸರಣಿಯಲ್ಲಿ ಹೊಸ ಪ್ರಯೋಗ
ಹೈದರಾಬಾದ್ , ಶುಕ್ರವಾರ, 6 ಡಿಸೆಂಬರ್ 2019 (10:29 IST)
ಹೈದರಾಬಾದ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಇಂದಿನಿಂದ ಟಿ20 ಸರಣಿ ಆರಂಭವಾಗಲಿದ್ದು, ಇಂದಿನ ಪಂದ್ಯದಿಂದ ಸೀಮಿತ ಓವರ್ ಗಳ ಪಂದ್ಯದಲ್ಲಿ ಹೊಸದೊಂದು ನಿಯಮ ಜಾರಿಗೆ ಬರಲಿದೆ.


ನೋ ಬಾಲ್ ವಿಚಾರವಾಗಿ ಇದುವರೆಗೆ ಮೈದಾನದ ಅಂಪಾಯರ್ ಗಳೇ ತೀರ್ಮಾನ ಕೈಗೊಳ್ಳುತ್ತಿದ್ದರು. ಆದರೆ ಇದರಿಂದ ಆಟಗಾರರು ಮತ್ತು ಅಂಪಾಯರ್ ನಡುವೆ ವಾಗ್ವಾದಗಳು ನಡೆಯುತ್ತಿದ್ದವು. ಇದನ್ನೆಲ್ಲಾ ತಡೆಯಲು ಐಸಿಸಿ ಹೊಸ ನಿಯಮ ರೂಪಿಸಿದೆ.

ಇಂದಿನಿಂದ ನೋ ಬಾಲ್ ವಿಚಾರವನ್ನು ಥರ್ಡ್ ಅಂಪಾಯರ್ ಅಥವಾ ಟಿವಿ ಅಂಪಾಯರ್ ಗಳೇ ನಿರ್ಧರಿಸಲಿದ್ದಾರೆ. ಹೀಗಾಗಿ ಅಂಪಾಯರ್ ಗಳು ಎಡವಟ್ಟು ಮಾಡಿಕೊಂಡು ತಪ್ಪಾಗಿ ನೋ ಬಾಲ್ ಘೋಷಿಸುವ ಸಾಧ‍್ಯತೆ ಇರಲ್ಲ. ಹೀಗಾಗಿ ಪ್ರತೀ ಎಸೆತವನ್ನು ಟಿವಿ ಅಂಪಾಯರ್ ಗಳು ಬೌಲರ್ ನ ಮುಂಗಾಲು ಪರಿಶೀಲಿಸಿ ನೋ ಬಾಲ್ ಬಗ್ಗೆ ನಿರ್ಣಯ ಕೈಗೊಳ್ಳಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಧೋನಿ ಹೆಸರು ಕೂಗಬೇಡಿ! ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಹೀಗೆ ತಾಕೀತು ಮಾಡಿದ್ದೇಕೆ?