Publish Date: Wed, 11 Dec 2019 (09:06 IST)
Updated Date: Wed, 11 Dec 2019 (09:08 IST)
ಮುಂಬೈ: ಭಾರತ-ವೆಸ್ಟ್ ಇಂಡೀಸ್ ನಡುವೆ ಅಂತಿಮ ಟಿ20 ಪಂದ್ಯ ಇಂದು ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿದ್ದು, ಈ ಪಂದ್ಯಕ್ಕೆ ಫೈನಲ್ ಕಳೆ ಬಂದಿದೆ.
ಎರಡೂ ಪಂದ್ಯಗಳಲ್ಲಿ ಒಂದೊಂದು ಪಂದ್ಯವನ್ನು ಎರಡೂ ತಂಡಗಳು ಗೆದ್ದುಕೊಂಡಿರುವುದರಿಂದ ಇಂದು ಗೆಲ್ಲುವ ತಂಡ ಸರಣಿ ತನ್ನದಾಗಿಸಿಕೊಳ್ಳಲಿದೆ.
ಭಾರತಕ್ಕೆ ಫೀಲ್ಡಿಂಗ್ ನದ್ದೇ ಚಿಂತೆಯಾಗಿದೆ. ಕಳೆದ ಪಂದ್ಯದಲ್ಲಂತೂ ಫೀಲ್ಡಿಂಗ್ ಸಂಪೂರ್ಣ ಕೈಕೊಟ್ಟು ಹೀನಾಯವಾಗಿ ಪಂದ್ಯ ಸೋಲಬೇಕಾಯಿತು. ಅದಲ್ಲದೆ ರೋಹಿತ್ ಶರ್ಮಾ ಕಳೆದ ಎರಡೂ ಪಂದ್ಯಗಳಲ್ಲಿ ಬೇಗನೇ ಔಟಾಗಿ ಭಾರತಕ್ಕೆ ದೊಡ್ಡ ಮೊತ್ತ ಪೇರಿಸಲು ಕೊಂಚ ಕಷ್ಟವಾಗಿದೆ. ಹೀಗಾಗಿ ಇವೆರಡನ್ನೂ ಸುಧಾರಿಸದೇ ಇದ್ದರೆ ಭಾರತಕ್ಕೆ ಗೆಲ್ಲುವುದು ಕಷ್ಟ. ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ನಲ್ಲಿ ಪ್ರಸಾರವಾಗಲಿದೆ.