ಮುಂಬೈ: ರವಿಚಂದ್ರನ್ ಅಶ್ವಿನ್ ಡೆಲ್ಲಿ ತಂಡದ ಪಾಲಾದ ಬಳಿಕ ಇದೀಗ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಈ ಬಾರಿಯ ಐಪಿಎಲ್ ನಲ್ಲಿ ಹೊಸ ನಾಯಕ ಯಾರು ಎಂಬ ಪ್ರಶ್ನೆ ಉದ್ಭವವಾಗಿದೆ.
ಮೂಲಗಳ ಪ್ರಕಾರ ಕನ್ನಡಿಗ ಕೆಎಲ್ ರಾಹುಲ್ ಗೆ ಈ ಪಟ್ಟ ಸಿಗುವ ಸಾಧ‍್ಯತೆಯಿದೆ. ಆರಂಭಿಕರಾಗಿ ಪಂಜಾಬ್ ಪರ ಅದ್ಭುತ ಪ್ರದರ್ಶನ ನೀಡಿದ್ದ ರಾಹುಲ್ ಗೆ ನಾಯಕತ್ವದ ಜವಾಬ್ಧಾರಿ ವಹಿಸಲು ಪಂಜಾಬ್ ಫ್ರಾಂಚೈಸಿ ಚಿಂತನೆ ನಡೆಸಿದೆ.
ಕಳೆದ ಎರಡು ಆವೃತ್ತಿಗಳಿಂದ ಪಂಜಾಬ್ ತಂಡದ ಪರ ಆಡುತ್ತಿರುವ ರಾಹುಲ್ ರನ್ ಗಳಿಕೆಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅತ್ತ ಪಂಜಾಬ್ ಕೂಡಾ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿರಲಿಲ್ಲ. ಹೀಗಾಗಿ ಯುವ ಆಟಗಾರನಿಗೆ ನಾಯಕತ್ವ ನೀಡಿ ತಂಡದ ಪ್ರದರ್ಶನ ಸುಧಾರಿಸಲು ಯೋಜನೆ ರೂಪಿಸಲಾಗುತ್ತಿದೆ ಎನ್ನಲಾಗಿದೆ.