Publish Date: Thu, 18 Nov 2021 (10:18 IST)
Updated Date: Thu, 18 Nov 2021 (10:19 IST)
ಜೈಪುರ: ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದ ವೇಳೆ ಎತ್ತಲೋ ನೋಡುತ್ತಿದ್ದ ರೋಹಿತ್ ಶರ್ಮಾ ತಲೆ ಮೇಲೆ ನಾಯಕ ರೋಹಿತ್ ಶರ್ಮಾ ಹೊಡೆದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರೋಹಿತ್ ತಮಾಷೆಯ ವ್ಯಕ್ತಿ ಎಂದು ಎಲ್ಲರಿಗೂ ಗೊತ್ತು. ಟೀಂ ಇಂಡಿಯಾ ಬ್ಯಾಟಿಂಗ್ ಮಾಡುತ್ತಿದ್ದಾಗ ಡಗ್ ಔಟ್ ನಲ್ಲಿ ಹಿಂದಿನ ಸಾಲಿನಲ್ಲಿ ಕೂತಿದ್ದ ರೋಹಿತ್, ಕೆಎಲ್ ರಾಹುಲ್, ಸಿರಾಜ್ ಜೋಡಿ ತಮಾಷೆ ಮಾಡಿಕೊಳ್ಳುತ್ತಾರೆ.
ಈ ವೇಳೆ ಎತ್ತಲೋ ಕಣ್ಣು ಹಾಯಿಸುತ್ತಿದ್ದ ಮೊಹಮ್ಮದ್ ಸಿರಾಜ್ ತಲೆಗೆ ಮೊಟಕುವ ರೋಹಿತ್ ತಮ್ಮತ್ತ ಗಮನ ಸೆಳೆಯುತ್ತಾರೆ. ತಲೆಗೆ ಏಟು ಕೊಡುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಿರಾಜ್ ಬಗ್ಗೆ ನೆಟ್ಟಿಗರು ತಮಾಷೆ ಮಾಡಿದ್ದಾರೆ.